ಸಾಮಾಜಿಕ ಮಾಧ್ಯಮಗಳಲ್ಲೇ ದೇಶಭಕ್ತಿಯ ಉತ್ಸಾಹ - ಪ್ರಣೀತಾ
ಬೆಂಗಳೂರು: ನಾನು ಉತ್ತಮ ಗುಣಮಟ್ಟದ ಸಿನಿಮಾಗಳಿಗೆ ಆದ್ಯತೆ ನೀಡುತ್ತೇನೆಯೇ ಹೊರೆತು ಸಿನಿಮಾ ಸಂಖ್ಯೆಗಳಿಗಲ್ಲ ಎಂದು ನಟಿ ಪ್ರಣೀತಾ ಸುಭಾಷ್ ಅಭಿಪ್ರಾಯಪಟ್ಟಿದ್ದಾರೆ
ಮಾಸ್ ಲೀಡರ್ ಸಿನಿಮಾ ಸೇನಾಧಿಕಾರಿಯ ಕಥೆಯದ್ದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತುಗಣ ರಾಜ್ಯೋತ್ಸವಗಳ ಆಚರಣೆ ಕೂಡ ಸಿನಿಮಾದಲ್ಲಿ ನಡೆಯಲಿದೆ. ಇಂದಿನ ದಿನಗಳಲ್ಲಿ ಜನರು ದೇಶಭಕ್ತಿಯನ್ನು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ತೋರಿಸಿದ್ದಾರೆ. ಆನ್ ಲೈನ್ ನಲ್ಲಿ ಜಗಳ, ಆಕ್ಷೇಪ , ಕಾಮೆಂಟ್ಸ್ ಹಾಕುವುದು ಕೇವಲ ಸುದ್ದಿ ಸೃಷ್ಠಿಸುತ್ತದೆಯೇ ಹೊರೆತು, ಸಮಸ್ಯೆಗೆ ಪರಿಹಾರ ತಿಳಿಸುವುದಿಲ್ಲ ಎಂದು ಪ್ರಣಿತಾ ಹೇಳಿದ್ದಾರೆ.
ಸದ್ಯ ಶಿವರಾಜಾ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕ್ರೆಡಿಟ್ ನಟರಾದ ವಿಜಯ್ ರಾಘವೇಂದ್ರ ಯೋಗಿ, ಗುರುರಾಜ್ ಜಗ್ಗೇಶ ಮತ್ತು ಶರ್ಮಿಳಾ ಮಾಂಡ್ರೆ ವಂಶಿ ಕೃಷ್ಣಾ ಅವರಿಗೆ ಸಲ್ಲಿಸಿದ್ದಾರೆ. ಮಾಸ್ ಲೀಡರ್ ಸಿನಿಮಾದಲ್ಲಿ ನನ್ನ ಪಾತ್ರ ಸೇರಿ ಪ್ರತಿಯೊಂದು ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ. ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ಜತೆಗೆ ಕಾಣಿಸಿಕೊಂಡಿದ್ದಾರೆ.
Comments