ನಟಿ ಪ್ರಿಯಾಮಣಿ ಮದುವೆ 23ಕ್ಕೆ

ದಕ್ಷಿಣ ಭಾರತ ನಟಿ ಪ್ರಿಯಾಮಣಿ ಇದೇ ಆಗಸ್ಟ್ 23ರಂದು ಮದುವೆಯಾಗಲಿದ್ದಾರೆ. ತಮ್ಮ ಬಹುದಿನದ ಗೆಳೆಯ ಮುಸ್ತಫಾ ರಾಜಾ ಅವರನ್ನು ವಿವಾಹವಾಗಲಿದ್ದು, ಮುಂಬೈ ಮೂಲದ ಮುಸ್ತಫಾ ರಾಜಾ ಅವರೊಂದಿಗೆ ಪ್ರಿಯಾಮಣಿ ಕಳೆದ 27ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಆಗಸ್ಟ್ 24ರಂದು ಪಂಚತಾರಾ ಹೊಟೇಲ್ ನಲ್ಲಿ ಆರತಕ್ಷತ ನಡೆಯಲಿದೆ. ಈ ವೇಳೆ ನಾಲ್ಕು ಭಾಷೆಗಳ ಸಿನಿಮಾರಂಗದ ಗಣ್ಯರು ಆಗಮಿಸಲಿದ್ದಾರೆ.
ಪ್ರಿಯಾಮಣಿ ಅವರು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಈ ವೇಳೆ ಪ್ರಿಯಾಮಣಿ ಕುಟುಂಬವರ್ಗ ಮತ್ತು ಆಪ್ತರು ಮಾತ್ರ ಉಪಸ್ಥಿತರಿರುವರು ಎನ್ನಲಾಗಿದೆ.
Comments