'ಮಾಸ್ ಲೀಡರ್' ಚಿತ್ರ ಬಿಡುಗಡೆ ಆಗಸ್ಟ್ 11ಕ್ಕೆ
ಬೆಂಗಳೂರು: ನಿರ್ದೇಶಕ -ನಿರ್ಮಾಪಕ ಎ.ಎಮ್ ರಮೇಶ್ ಅವರು ಮಾಸ್ ಲೀಡರ್ ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತಡೆ ತಂದಿರುವ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ. ಈ ವಿಷಯ ಶಿವರಾಜ ಕುಮಾರ್ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.
ಏಕೆಂದರೆ ಶಿವರಾಜ್ ಕುಮಾರ ಅಭಿನಯದ ಚಿತ್ರವೊಂದರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿ, ಆ ದಿನ ಚಿತ್ರ ಬಿಡುಗಡೆಯಾಗುವ ಉದಾಹರಣೆ ಇಲ್ಲ. ಹಾಗಿದ್ದಾಗ ಈ ಸಂಪ್ರದಾಯದ ಪ್ರಕಾರ ಮಾಸ್ ಲೀಡರ್ ಮುರಿಯುತ್ತದಾ ಎಂಬ ಭಯ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಚಿತ್ರ ಯಾವುದೇ ಕಾರಣಕ್ಕೂಮಿಸ್ ಆಗುವುದಿಲ್ಲ. ಮೊದಲು ಹೇಳಿದಂತೆ ಚಿತ್ರವನ್ನು ಆಗಸ್ಟ್ 11ರಂದು ಬಿಡುಗಡೆ ಮಾಡುವುದಾಗಿ ಮಾಸ್ ಲೀಡರ್ ಚಿತ್ರದ ನಿರ್ಮಾಪಕ ತರುಣ್ ಹೇಳಿದ್ದಾರೆ.
Comments