ಹಂಪಿಗೆ ಅಲ್ಲು ಅರ್ಜುನ್ ಭೇಟಿ
ಬಳ್ಳಾರಿ: ವಿಶ್ವವಿಖ್ಯಾತ ಹಂಪಿಗೆ ತೆಲಗು ನಟ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಬಳ್ಳಾರಿಗೆ ಬಂದು ಹಂಪಿಗೆ ಭೇಟಿ ನೀಡಿದ್ದಾರೆ. ಹಂಪಿಯ ವಿರುಪಾಕ್ಷೇಶ್ವರ ದರ್ಶನ ಪಡೆದ ಅಲ್ಲು ಅರ್ಜುನ್ ಆ ಬಳಿಕ ಅಲ್ಲಿನ ವಾಸ್ತುಶಿಲ್ಪ ವೀಕ್ಷಣೆ ಮಾಡಿದರು.
ಅನಂತರ ಹಂಪಿಯ ಜನತಾ ಪ್ಲಾಟ್ ನಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಊಟ ಮಾಡಿದ್ರು. ಈ ವಿಷಯ ತಿಳಿದ ಅಲ್ಲು ಅರ್ಜುನ್ ಅಭಿಮಾನಿಗಳು ಭಾರೀ
ಸಂಖ್ಯೆಯಲ್ಲಿ ಸೇರಿದ್ದರು. ಇದೇ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನೊಂದಿಗೆ ಫೊಟೋ ಕ್ಲಿಕ್ಕಿಸಲು ಮುಗಿ ಬಿದ್ದ ಘಟನೆ ಕೂಡ ನಡೀತು. ಈ ಮಧ್ಯೆ
ಅಭಿಮಾನಿಗಳ ಮಧ್ಯೆ ಸಿಕ್ಕಿ ಬಿದ್ದ ಅಲ್ಲು ಅರ್ಜುನ್ ಫಜೀತಿಗೆ ಒಳಗಾದರು. ಅಲ್ಲಿ ನೆರದಿದ್ದ ಅಭಿಮಾನಿಗಳನ್ನು ಪೊಲೀಸರು ನಿಯಂತ್ರಿಸಿದರು.
Comments