ಎಕ್ಸಕ್ಲೂಸಿವ್: ತೆಲಗು ಚಿತ್ರದಲ್ಲಿ ಸುದೀಪ್

ಬೆಂಗಳೂರು: ಕನ್ನಡ ಭಾಷೆಗೆ ಮೆರಗು ತಂದು ಕೊಟ್ಟ, ಕನ್ನಡ ಜನರ, ಅಭಿಮಾನಿಗಳ ಹೃದಯ ಗೆದ್ದಿರುವ ಖ್ಯಾತ ನಟ ಕಿಚ್ಚ ಸುದೀಪ್ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ಚಿತ್ರಕ್ಕೂ ಸುದೀಪ್ ಗೆ ಆಫರ್ ಬಂದಿದೆ ಎಂದು ಇತ್ತೀಚೆಗೆ ಕೇಳಿ ಬರುತ್ತಿದೆ, ಈಗ ಸುದೀಪ್ ತೆಲುಗಿನ ಐತಿಹಾಸಿಕ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಟಾಲಿವುಡ್ ಮಾಧ್ಯಮಗಳಿಂದ ಕೇಳಿ ಬರುತ್ತಿದೆ.
ಈಗ ಕಿಚ್ಚ ಸುದೀಪ್ ಅವರ ವೃತ್ತಿ ಜೀವನಕ್ಕೆ ಇನ್ನಷ್ಟು ಕಿಚ್ಚು ಹಚ್ಚುವ ಬೆಳವಣಿಗೆಗಳು ಆಗುತ್ತಿವೆ. ಕಿಚ್ಚ ಸುದೀಪ್ ತೆಲುಗು ಚಿತ್ರ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಐತಿಹಾಸಿಕ ಚಿತ್ರದಲ್ಲಿ ಉಯ್ಯಲ್ವಾಡಾ ನರಸಿಂಹರೆಡ್ಡಿ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾತ್ರಕ್ಕೆ ಅಮಿತಾಬ್ ಬಚ್ಚನ್ ಹೆಸರು ಕೇಳಿ ಬಂದಿತ್ತು. ಆದರೆ ಈಗ ಈ ಪಾತ್ರಕ್ಕಾಗಿ ಸುದೀಪ್ ಅವರ ಕಡೆಗೆ ಬೆರಳು ಮಾಡಿ ತೋರಿಸಲಾಗುತ್ತಿದೆ. ಈ ಚಿತ್ರಕ್ಕಾಗಿ ಈಗಾಗ್ಲೇ ಸುದೀಪ್ ಅವರನ್ನು ಸಂಪರ್ಕಿಸಲಾಗಿದೆಯಂತೆ. ಆದರೆ ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ.
ಈ ಹಿಂದೆ ತೆಲುಗಿನ ಈಗಾ ಚಿತ್ರದಲ್ಲಿ ನಟಿಸಿದ್ದ ಸುದೀಪ್ ಇದು ತೆಲುಗು ಇಂಡಸ್ಟ್ರಿ ಅಲ್ದೇ ಇಡೀ ತೆಲುಗಿನ ಪ್ರೇಕ್ಷಕರುಸುದೀಪ್ ಅವರ ಅಭಿನಯ ಕಂಡು ಮೂಕವಿಸ್ಮೀತರನ್ನಾಗಿ ಮಾಡಿತು. ಎಸ್.ಎಸ್ ರಾಜಮೌಳಿ ನಿರ್ದೇಶನದ 'ಈಗಾ' ಚಿತ್ರದಲ್ಲಿ ಸುದೀಪ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕನೇ ನೊಣವಾಗಿ ಬಂದು ಖಳ ನಾಯಕನನ್ನು ಕಾಡುವ ಚಿತ್ರವಿದು.ಇಡೀ ಚಿತ್ರದಲ್ಲಿ ನಾಯಕನ ಪಾತ್ರಕ್ಕಿಂತ ಖಳನಾಯಕನ ಪಾತ್ರವೇ ರಾರಾಜಿಸಿತ್ತು. ನಾಯಕಿ ಆಗಿ ಸಮಂತಾ ಕಾಣಿಸಿಕೊಂಡಿದ್ದರು
Comments