ನಟಿ ರಾಧಿಕಾ ಇಷ್ಟು ದಿನ ಕಾದಿದ್ದೇಕೆ?
ನಟಿ ರಾಧಿಕಾ ಇಷ್ಟು ದಿನ ಕಾದಿದ್ದೇಕೆ? ಬೆಂಗಳೂರು: ಮದುವೆಯಾದ ಮೇಲೆ ಇನ್ನು ನಟಿ ರಾಧಿಕಾ ಪಂಡಿತ್ ನಟಿಸುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದನ್ನುಬಲವಾಗಿ ತಳ್ಳಿ ಹಾಕಿರುವ ನಟಿ ರಾಧಿಕಾ ಪಂಡಿತ್, ಮದುವೆ ಆದ ಮೇಲೂ ನಟನಾವೃತ್ತಿಯಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ. ಮ್ಯಾರೇಜ್ ಆದ ಮೇಲೆ ರಾಧಿಕಾ ಯಾವುದೇ ಚಿತ್ರಕ್ಕೆ ಸಹಿ ಹಾಕದ ಕಾರಣ ರಾಧಿಕಾ ಕಳೆದು ಹೋದರೆ? ಎಂದು ಅಭಿಮಾನಿಗಳು ಯೋಚನೆ ಮಾಡುತ್ತಿದ್ದರು. ಈ ಕುರಿತು ಅನುಮಾನ ವ್ಯಕ್ತವಾಗಿತ್ತು.ರಾಧಿಕಾ ಹೊಸ ಸಿನಿಮಾದಲ್ಲಿ ನಟಿಸಲು ಇಷ್ಟು ದಿನ ಕಾದಿದ್ದೇಕೆ? ಮದುವೆ ಆದ ಮೇಲೆ ಸಿನಿಮಾ ಮಾಡುತ್ತೇನೆ ಎಂಬ ವಿಶ್ವಾಸ ನನಗಿತ್ತು.ಸಿನಿಮಾ ಮಾಡುವುದಕ್ಕೆ ಯಶ್ ಹಾಗೂ ಕುಟುಂಬದವರ ಬೆಂಬಲ ಇದ್ದೇ ಇದೆ. ಆದರೆ ಎಲ್ಲವು ಕೂಡಿ ಬರಬೇಕಲ್ಲವೇ? ಎಂದು ಪ್ರಶ್ನೆ ಹಾಕಿ ನಸು ನಕ್ಕಿದ್ದಾರೆ ರಾಧಿಕಾಪಂಡಿತ ಈಗಾಗ್ಲೇ ನಿರ್ದೇಶಕ ಮಣಿರತ್ನಂ ಅವರ ಜತೆಗೆ ಸಹಾಯಕಿಯಾಗಿ ಕೆಲಸ ಮಾಡಿರುವ ತಮಿಳಿನ ಪ್ರಿಯಾ ಎನ್ನುವವರು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಈಗಾಗ್ಲೇ ಕೇಳಿ ಬಂದಿದೆ.
Comments