ಆಗಸ್ಟ್ 6ಕ್ಕೆ ಸೆಟ್ಟೇರಲಿದೆ ಕನ್ನಡದ ಬಿಗ್ ಬಜೆಟ್ ಚಿತ್ರ
ಬಾಹುಬಲಿ ಭಾರತೀಯ ಚಿತ್ರರಂಗಕ್ಕೆ ಪ್ರೇರಣೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ಯಾಂಡಲ್ವುಡ್ ನಲ್ಲಿ ಕೂಡ ಬಾಹುಬಲಿಯಂತೆ ಅದ್ಧೂರಿ ಚಿತ್ರವೊಂದು ನಿರ್ಮಾಣವಾಗ್ತಿದೆ. ಅದೇ ‘ಕುರುಕ್ಷೇತ್ರ’. ಈ ಚಿತ್ರದ ಬಜೆಟ್ ಬರೋಬ್ಬರಿ 100 ಕೋಟಿ ರೂಪಾಯಿ.
ಮುನಿರತ್ನ, ಕುರುಕ್ಷೇತ್ರ ಚಿತ್ರದ ನಿರ್ಮಾಪಕರು. ಆಗಸ್ಟ್ 6ರಂದು ಚಿತ್ರ ಸೆಟ್ಟೇರಲಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಲಿದ್ದಾರೆ. ರವಿಚಂದ್ರನ್ ಶ್ರೀಕೃಷ್ಣನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ನಾಗಣ್ಣ ನಿರ್ದೇಶಕರು.
ಕೌರವರ ದೃಷ್ಟಿಕೋನದಲ್ಲಿ ಮಹಾಭಾರತವನ್ನು ನಾಗಣ್ಣ ತೆರೆ ಮೇಲೆ ಸೃಷ್ಟಿಸಲಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಗಾಗಿ ವಿಶೇಷ ಸೆಟ್ ಅನ್ನು ನಿರ್ಮಾಣ ಮಾಡಲಾಗ್ತಿದೆ. ಆಗಸ್ಟ್ 6ಕ್ಕೆ ಹೈದ್ರಾಬಾದ್ ನಲ್ಲೇ ಚಿತ್ರಕ್ಕೆ ಮುಹೂರ್ತ ಕೂಡ ನೆರವೇರಲಿದೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಕುರುಕ್ಷೇತ್ರ ರಿಲೀಸ್ ಆಗುವ ನಿರೀಕ್ಷೆ ಇದೆ.
Comments