B'Day Spcl, ಸಿಖ್ ಕುಟುಂಬದ ನಟಿ ತಪಸ್ಸಿ ಪನ್ನು
ಬಾಲಿವುಡ್ ನ ನಟಿ ತಪಸ್ಸಿ ಪನ್ನು ಸಿಖ್ ಕುಟುಂಬದಲ್ಲಿ ಜನಿಸಿದವರು. ಇವತ್ತು ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಸರು ಪಡೆದಿರುವ ತಪಸ್ಸಿ ಪನ್ನು ಬಾಲಿವುಡ್ ನ ಕೆಲ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದರು. 'ಪಿಂಕ್' 'ಬೇಬಿ,' ಹಾಗೂ 'ನಾಮ್ ಶಬಾನಾ 'ಇವರು ನಟಿಸಿದ್ದ ಕೆಲ ಬಾಲಿವುಡ್ ಚಿತ್ರಗಳು. ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಅವರ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. 2016ರಲ್ಲಿ ತೆರೆಕಂಡ ಅನುರಾಧ್ ಚೌಧರಿ ನಿರ್ಮಾಣದಲ್ಲಿ ಮೂಡಿ ಬಂದ ಅಮಿತಾಬ್ ಬಚ್ಚನ್ ನಟನೆಯ 'ಪಿಂಕ್' ಚಿತ್ರದಲ್ಲಿ ತಪಸ್ಸಿ ಅವರ ಅದ್ಭುತ ಪ್ರದರ್ಶನ ನೀಡಿ ಬಾಲಿವುಡ್ ಮಂದಿಯ ಪ್ರಶಂಸೆ ಗಳಿಸಿದರು.
ದೆಹಲಿಯಲ್ಲಿ ಜನಿಸಿದ ತಪಸ್ಸು ಪನ್ನು ಸಿಖ್ ಕುಟುಂಬದ ಹಿನ್ನಲೆಯಿಂದ ಬಂದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಗಳಿಸಿದರು. ಪ್ರಾಥಮಿಕ ಶಿಕ್ಷಣವನ್ನು ದೆಹಲಿಯಲ್ಲಿ ಪೂರ್ಣಗೊಳಿಸಿದರು. ತಮಿಳು, ಮಲೆಯಾಳಂ ಹಾಗೂ ತೆಲಗು ಚಿತ್ರರಂಗದಲ್ಲಿ ನಟಿಸಿರುವ ತಪಸ್ಸಿ ಹೆಸರು ದಕ್ಷಿಣ ಭಾರತದಲ್ಲಿ ಪರಿಚಿತವಾದ ಹೆಸರು. ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
Comments