ನಾನು ಯಾವತ್ತಿಗೂ 'ರಾಧಿಕಾ ಕುಮಾರಸ್ವಾಮಿಯೇ'

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಖಾಸಗಿ ಬದುಕಿನ ಬಗ್ಗೆ, ಇತ್ತೀಚೆಗೆ ಅವರ ಬಗ್ಗೆ ಕೇಳಲಾಗಿರುವ ಗಾಸಿಪ್ ಗಳ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ಪತ್ರಿಕೆಯೊಂದರ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮನ ಬಿಚ್ಚಿ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, ಬೆಂಗಳೂರು ಬಿಟ್ಟಿದ್ದಾರೆಂಬ ಸುದ್ದಿ ಈ ಹಿಂದೆ ಕೇಳಿ ಬಂದಿತ್ತು. ಅವರ ಸಂಸಾರದಲ್ಲೂ ಬಿರುಕು ಮೂಡಿವೆ ಎಂಬ ಸುದ್ದಿಗಳು ಇತ್ತಿಚ್ಚೆಗೆ ಕೇಳಿ ಬರುತ್ತಲೇ ಇದ್ದವು. ಚಿತ್ರರಂಗದಿಂದಲೂ ರಾಧಿಕಾ ದೂರವಾಗಿ ಬಿಟ್ಟಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ಬಂದಿರುವ ರಾಧಿಕಾ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ನನ್ನ ಹೆಸರು ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿ, ಸಾಯೋವರೆಗೂ ಆ ಹೆಸರು ಬದಲಾಗಲ್ಲ. ಕೊನೆಯವರೆಗೂ ನನ್ನ ಹೆಸರು ಬದಲಾಗೋಲ್ಲ. ನಾನು ಯಾವತ್ತಿಗೂ ರಾಧಿಕಾ ಕುಮಾರಸ್ವಾಮಿಯಾಗಿಯೇ ಇರುತ್ತೇನೆ. ಆ ಹೆಸರು ಸದಾ ನನ್ನ ಜತೆಗೆ ಇರುತ್ತದೆ. ಬದುಕು, ಬದುಕಿನ ಶೈಲಿ ಬದಲಾಗಿರಬಹುದು. ಆದರೆ ಹೆಸರು ಮತ್ತು ನನ್ನ ವ್ಯಕ್ತಿತ್ವ ಯಾವತ್ತೂ ಬದಲಾಗುವುದಿಲ್ಲ.ಅದು ಸಾಧ್ಯನೇ ಇಲ್ಲ ಎಂದು ಹೇಳಿದ್ದಾರೆ.
ನನ್ನ ಬಗ್ಗೆ ಹಲವು ಗಾಸಿಪ್ ಕೇಳಿ ಬರುತ್ತಿವೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ, ಇವತ್ತಿಗೂ ನಾನು ಬೆಂಗಳೂರಿನಲ್ಲೇ ಇದ್ದೇನೆ. ನನ್ನ ಕುಟುಂಬದ ಜತೆಗೆ ಕಾಲ ಕಳೆಯಲೂ ಹಾಗೂ ನನ್ನ ವೈಯಕ್ತಿಕ ಕೆಲಸಗಳಿಗಾಗಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದೆ ಅಷ್ಟೇ. ನನಗೆ ಸಿನಿಮಾ ಒಂದೇ ಲೈಫ್ ಅಲ್ಲ. ನನ್ನ ಕುಟುಂಬವಿದೆ, ಮಗಳಿದ್ದಾಳೆ, ಬಿಜಿನೆಸ್ ಇದೆ.
ಅದನ್ನೆಲ್ಲವನ್ನು ನೋಡಿಕೊಳ್ಳಬೇಕು, ಅಷ್ಟಕ್ಕೆ ಆ ತರಹ ಗಾಸಿಪ್ ಹಬ್ಬಿಸಿದರು, ಇದರಿಂದ ಸಿನಿಮಾ ಅವಕಾಶಗಳು ಕೂಡ ನನಗೆ ಬರಲಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
Comments