ನೀವೇ ದೊಡ್ಡ ನಟ' ಎಂದಿದ್ದ ಸಲ್ಲುಗೆ ಅಕ್ಷಯ್ ಹೇಳಿದ್ದೇನು?

ಮುಂಬೈ: ಚಿತ್ರ ರಂಗದಲ್ಲಿ ನಟರ ಮಧ್ಯೆ ಸ್ಪರ್ಧೆ ಇರೋದು ಹೊಸತೇನಲ್ಲ. ಪ್ರತಿಯೊಬ್ಬ ತನ್ನದೇ ಆದ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದ್ರೆ ಬಾಲಿವುಡ್ ಸ್ಟಾರ್ ಗಳು ಒಮ್ಮೊಮ್ಮೆ ತಮ್ಮ ಸಹ ನಟರ ಬಗ್ಗೆ ಹೇಳಿಕೆ ನೀಡುತ್ತಾರೆ
ಅದರಂತೆ ಈಗ ಬಾಲಿವುಡ್ ನ ದಬ್ಬಾಂಗ್ ಖಾನ್ ಸಲ್ಮಾನ್ ತಮ್ಮ ಸಹ ನಟ ಅಕ್ಷಯ್ ಖಾನ್ ಅವರನ್ನು ಹೊಗಳಿದ್ದಾರೆ. 'ಅಕ್ಷಯ್ ಒಬ್ಬ ದೊಡ್ಡ ನಟ'
ಎಂದು ಹೇಳಿದ್ದರು. ಇದೀಗ ಸಲ್ಮಾನ್ ಖಾನ್ ಕಮೆಂಟ್ ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಸಿನಿಮಾದ ಮಾಧ್ಯಮಗೋಷ್ಠಿ ಯಲ್ಲಿ ಈ ಕುರಿತು ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.
ಸಲ್ಮಾನ್ ಹೇಳಿರುವಂತೆ ನಾನೇನು ದೊಡ್ಡ ನಟ ಅಲ್ಲ. ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಯಾರು ಎಂಬುದು ಎಲ್ಲರಿಗೂ ಗೊತ್ತು. ಸಲ್ಮಾನ್ ಖಾನ್ ದೊಡ್ಡ ನಟ, ಅವರ ಪ್ರತಿಯೊಂದು ಸಿನಿಮಾಗಳು ಕೂಡ ಬಿಗ್ ಸ್ಕ್ರೀನ್ ಮೇಲೆ ಯಶಸ್ಸು ಕಾಣುತ್ತವೆ. ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಹಣ ಗಳಿಕೆ ಮಾಡುತ್ತವೆ. ಸಲ್ಮಾನ್ ಖಾನ್ ನನಗಿಂತಲೂ ಸಿನಿಯರ್ ಎಂದು ನಯವಾಗಿ ಅಕ್ಷಯ್ ಕುಮಾರ್ ಹೇಳಿದ್ದಾರೆ.
Comments