'ದಿ ವಿಲನ್' ರಿಮೇಕ್: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಹೆಬ್ಬುಲಿ ಸುದೀಪ್

ಕನ್ನಡದ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್' ಈಗ ಮಲಯಾಳಂ ಭಾಷೆಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಶಿವಣ್ಣ ಮತ್ತು ಸುದೀಪ್ ನಟನೆಯ ಈ ಚಿತ್ರಕ್ಕೆ ಬಿಡುಗಡೆಗೆ ಮೊದಲೇ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಚಿತ್ರವನ್ನು ರಿಮೇಕ್ ಮಾಡಲು ನಿರ್ದೇಶನ ಪ್ರೇಮ್ ಆಲೋಚನೆ ಮಾಡಿದ್ದಾರಂತೆ.
'ದಿ ವಿಲನ್' ಚಿತ್ರದ ಮಲೆಯಾಳಂ ಭಾಷೆಯಲ್ಲಿಯೂ ತಮ್ಮ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರೇ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಹೆಚ್ಚಾಗಿದೆ. ಈ ಮೂಲಕ ಕನ್ನಡದ ಹೆಬ್ಬುಲಿ ಸುದೀಪ್ ಮಾಲಿವುಡ್ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಶುರುವಿನಿಂದ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿರುವ ಈ ಸಿನಿಮಾದ ಸದ್ದು ಈಗ ಮಾಲಿವುಡ್ ವರೆಗೂ ತಲುಪಿದೆ.
ಕನ್ನಡದ 'ದಿ ವಿಲನ್' ಸಿನಿಮಾ ಮಲೆಯಾಳಂ ನಲ್ಲಿ ರಿಮೇಕ್ ಆಗಲಿದೆ. ಮಲೆಯಾಳಂ ನಲ್ಲಿಯೂ ನಟ ಸುದೀಪ್ ಅವರೇ ತಮ್ಮ ಪಾತ್ರವನ್ನು ಮಾಡಲಿದ್ದಾರೆ.'ದಿ ವಿಲನ್' ಚಿತ್ರದಲ್ಲಿನ ಶಿವರಾಜ್ ಕುಮಾರ್ ಅವರ ಪಾತ್ರವನ್ನು ಮಲೆಯಾಳಂ ನಲ್ಲಿ ನಟ ಮೋಹನ್ ಲಾಲ್ ಅವರು ನಿರ್ವಹಿಸಲಿದ್ದಾರಂತೆ. ಅಲ್ಲಿ ಕಿಚ್ಚ ಸುದೀಪ್ ಮತ್ತು ಮೋಹನ್ ಲಾಲ್ ಕಾಂಬಿನೇಶನ್ ನಲ್ಲಿ ಸಿನಿಮಾ ಮೂಡಿ ಬರಲಿದೆ.
ಮಲಯಾಳಂ ನಲ್ಲಿ ಬರುವ ಈ ಚಿತ್ರದಲ್ಲಿಯೂ ನಾಯಕಿಯಾಗಿ ಆಮಿ ಜಾಕ್ಸನ್ ಅವರೇ ಮುಂದುವರೆಯಲಿದ್ದಾರಂತೆ. ಇದು ಆಮಿ ಜಾಕ್ಸನ್ ಅವರ ಮೊದಲ ಮಲೆಯಾಳಂ ಸಿನಿಮಾ ಆಗಲಿದೆ ಎಂಬುದು ಮತ್ತೊಂದು ವಿಶೇಷ. ನಿರ್ದೇಶಕ ಪ್ರೇಮ್ 'ದಿ ವಿಲನ್' ಸಿನಿಮಾವನ್ನು ರಿಮೇಕ್ ಮಾಡುವುದು ಪಕ್ಕಾ ಆಗಿದ್ದು, ಅದು ಯಾವಾಗ ಎಂಬ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ.
Comments