ಬೌದ್ಧ ಧರ್ಮಕ್ಕೆ ಅಕ್ಷರಾ ಹಾಸನ್ ಕನ್ವರ್ಟ್
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಬೌದ್ಧಧರ್ಮವು ಆಧ್ಯಾತ್ಮಿಕವಾಗಿ ಧರ್ಮದ ಕಡೆಗೆ ಒಲವು ತೋರುತ್ತದೆ. ಈ ಕಾರಣದಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ನನ್ನ ಸಹೋದರಿಯಂತೆ ನಾನು ನಾಸ್ತಿಕಳು. ನನಗೆ ಬೌದ್ಧ ಧರ್ಮನದ ಆಚರಣೆ ತತ್ವ ಸಿದ್ಧಾಂತಗಳು ಇಷ್ಟವಾಯಿತು. ಹೀಗಾಗಿ ಮತಾಂತರೊಗೊಂಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಕಷ್ಟಪಡುವುದರಿಂದಲೆ ಜೀವನದಲ್ಲಿ ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗುತ್ತದೆ ಎಂದಿರುವ ಅಕ್ಷರಾ ಇತ್ತೀಚೆಗಷ್ಟೇ ತಾವು ಬೌದ್ಧಧರ್ಮವನ್ನು ಸ್ವೀಕರಿಸಿದ್ದಾಗಿ ಹೇಳಿದ್ದಾರೆ.
ನನ್ನ ತಂದೆ, ತಾಯಿ ಮತ್ತು ,ಸಹೋದರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡುವುದು ನನ್ನ ಬಯಕೆಯಾಗಿದೆ. ಆ ಮೂಲಕ ನಾನು ನಿರ್ದೇಶನಕ್ಕೆ ಸೂಕ್ತವಾದವಳು ಎಂಬುದನ್ನು ತೋರಿಸುತ್ತೇನೆ ಎಂದು ವಿವರಿಸಿದ್ದಾರೆ.
Comments