ನಟ ರಿಷಿಗೆ ಮೂರನೇ ಚಿತ್ರದ ಅವಕಾಶ
ಆಪ್ ರೇಷನ್ ಆಲಮೇಲಮ್ಮ ಚಿತ್ರ ಹೊರಬರುತ್ತಿದ್ದಂತೆ ಚಿತ್ರದ ನಾಯಕ ರಿಷಿಗೆ ಅವಕಾಶಗಳು ಬರುತ್ತಿವೆ. ಹೇಮಂತ್ ರಾವ್ ನಿರ್ದೇಶನದಲ್ಲಿ ಕವಲು ದಾರಿ ಚಿತ್ರ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈಗ ಹೊಸ ಸುದ್ದಿ ಎಂದರೆ, ನಿರ್ಮಾಪಕ ಜಯಣ್ಣ ಅವರ ಬ್ಯಾನರ್ ನಲ್ಲಿ ರಿಷಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ವೀರೇಂದ್ರ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದು ಈ ಹೊತ್ತಿನ ಹೊಸ ಸುದ್ದಿ. ರಿಷಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಮಹಾರಥಿ ಎಂದು ನಾಮಕರಣ ಮಾಡಲಾಗಿದೆ. ರಿಷಿ ಅಭಿನಯದ ಆಪರೇಷನ್ ಆಲಮೇಲಮ್ಮ ಈಗಷ್ಟೇ ಬಿಡುಗಡೆಯಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಕವಲು ದಾರಿ ಸಿನಿಮಾ ಶುರುವಾಗಲಿದೆ. ಈ ಚಿತ್ರದ ಬಳಿಕ ಜಯಣ್ಣ ನಿರ್ಮಾಣದ ಮಹಾರಥಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದ ನಾಯಕಿ ಸೇರಿದಂತೆ ಇನ್ನುಳಿದವರ ತಾರಾ ಬಳಗದ ಆಯ್ಕೆ ನಡೆಯಲಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡುತ್ತಿರುವುದು ಪಕ್ಕಾ ಆಗಿದೆ. ಉಳಿದಂತೆ ಇಷ್ಟರಲ್ಲೇ ಇನ್ನಷ್ಟು ಮಾಹಿತಿ ಹೊರಬೀಳಲಿದೆ.
Comments