ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ..!!



ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಲಿಸರುವ 50ನೇ ಚಿತ್ರ 'ಕುರುಕ್ಷೇತ್ರ' ಜುಲೈ 30 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸೆಟ್ಟೇರಲಿದೆ. ದರ್ಶನ್ ಸೇರಿದಂತೆ ಹಲವು ಪಾತ್ರಗಳು ಈಗಾಗಲೇ ಅಂತಿಮವಾಗಿದೆ. ದುರ್ಯೋಧನ, ಶ್ರೀಕೃಷ್ಣ, ಭೀಷ್ಮಾ, ದ್ರೋಣಾಚಾರ್ಯ, ಧೃತರಾಷ್ಟ್ರ, ಶಕುನಿ, ಕುಂತಿ, ಭಾನುಮತಿ, ಹೀಗೆ ಬಹುತೇಕ ಪಾತ್ರಗಳು ಸೋಲ್ಡ್ ಔಟ್ ಆಗಿವೆ.
ಪಾಂಡವರು ಪಾತ್ರಗಳು ಆಯ್ಕೆ ಪ್ರಕ್ರಿಯೆಯಲ್ಲಿದ್ದು, ಪಾಂಡವರಲ್ಲಿ ಮೊದಲ ಪಾತ್ರವಾಗಿ ಭೀಮ ಆಯ್ಕೆ ಆಗಿದ್ದಾರಂತೆ. ಯಾರೂ ಕೂಡ ಈ ನಟ ಭೀಮನ ಪಾತ್ರಕ್ಕೆ ಆಯ್ಕೆಯಾಗುತ್ತಾನೆಂದು ಊಹೆ ಮಾಡಿರಲಿಲ್ಲ. ಅಂತಹ ಕಲಾವಿದ 'ಕುರುಕ್ಷೇತ್ರ' ಕಾಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮುನಿರತ್ನ ನಿರ್ಮಾಣ ಮಾಡುತ್ತಿರುವ ಬಹುಕೋಟಿ ವೆಚ್ಚದ ಕುರುಕ್ಷೇತ್ರದಲ್ಲಿ ಭೀಮನ ಪಾತ್ರಕ್ಕಾಗಿ ರಾಣಾ ದಗ್ಗುಬಾಟಿ ಬರ್ತಾರೆ, ಮತ್ತೊಬ್ಬರು ಬರ್ತಾರೆ ಎನ್ನಲಾಗಿತ್ತು. ಆದ್ರೆ, ಅಂತಿಮವಾಗಿ ಬಾಲಿವುಡ್ ನಟ ಭೀಮನ ಪಾತ್ರಕ್ಕೆ ಆಯ್ಕೆ ಆಗಿದ್ದಾರಂತೆ. ಬಾಲಿವುಡ್ ನ ಕಿರುತೆರೆ ನಟ ಕಮ್ ಬಾಡಿ ಬಿಲ್ಡರ್ ಡ್ಯಾನಿಶ್ ಅಖ್ತರ್ ಸೈಫಿ ಭೀಮನ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕಿದೆಯಂತೆ.
ಡ್ಯಾನಿಶ್ ಅಖ್ತರ್ ಸೈಫಿ ಮುಂಬೈನಲ್ಲಿ ನೆಲಸಿರುವ ಬಿಹಾರ್ ನಿವಾಸಿ. ವೃತ್ತಿಯಲ್ಲಿ ಕಲಾವಿದನಾಗಿರುವ ಡ್ಯಾನೀಶ್ ಹಾಗೂ ಕುಸ್ತಿ ಪಟು ಕೂಡ ಹೌದು. 6.6 ಅಡಿ ಎತ್ತರ ಇರುವ ಡ್ಯಾನಿಶ್ 125 ಕೆ.ಜಿ ತೂಕವಿದ್ದಾರೆ. ಹಿಂದಿಯ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುವ ಸಿಯಾ ಕೇ ರಾಮ್ ಧಾರವಾಹಿಯಲ್ಲಿ ಡ್ಯಾನಿಶ್ ಅಖ್ತರ್ ಸೈಫಿ ಆಂಜನೇಯನ ಪಾತ್ರ ಮಾಡಿದ್ದರಂತೆ. ಈ ಪಾತ್ರದ ಮೂಲಕ ಬಾಲಿವುಡ್ ಪ್ರೇಕ್ಷಕರ ಗಮನ ಸೆಳೆದಿದ್ದರು.
Comments