ಲಾರಾ ದತ್ತ ಈ ಚಿತ್ರದಲ್ಲಿ ಕಮ್ ಬ್ಯ್ಬ್ಯಾಕ್ ಆಗಲಿದ್ದಾರಾ?

ಮುಂಬೈ : ಬಾಲಿವುಡ್ ನಟಿ ಲಾರಾ ದತ್ತ 'ಅಜರ್' ಚಿತ್ರ ಆದ್ಮೇಲೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ. 'ಅಜರ್' ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಮಿಂಚಿದ್ದ ಲಾರಾ ಇದೀಗ 'ಕ್ರೇಜಿ ಹಮ್' ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದೆ.
ಈ ಚಿತ್ರದಲ್ಲಿ ಲಾರಾ ದತ್ತ ನಟ ಆದಿತ್ಯ ರಾಯ್ ಕಪೂರ್ ಜತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಇನ್ನು ಲಾರಾ ದತ್ತಗೆ ಜತೆಯಾಗಿ ಸೋನಾಕ್ಷಿ ಸಿನ್ಹಾ ಹಾಗೂ ದಿಲ್ ಜೀತ್ ಕಾಣಿಸಿಕೊಳ್ಳಲಿದ್ದು, ಚಿತ್ರದ ಶೂಟಿಂಗ್ ಈಗಾಗ್ಲೇ ನ್ಯೂಯಾರ್ಕ್ ನಲ್ಲಿ ಆರಂಭವಾಗಿದೆ.
ಮೂವರು ಸ್ನೇಹಿತರ ಕುರಿತಾದ ಕಥೆ ಆಧಾರಿತ ಚಿತ್ರ ಎನ್ನಲಾಗುತ್ತಿದೆ. ಪ್ರಮುಖವಾಗಿ ಸೋನಾಕ್ಷಿೃ, ದಿಲ್ ಜೀತ್ ಹಾಗೂ ಆದಿತ್ಯ ಮೂವರ ಸ್ನೇಹದ ಕುರಿತು ಚಿತ್ರದಲ್ಲಿ ತೋರಿಸಲಾಗುತ್ತದೆ. ಆದ್ರೆ ಸಿನಿಮಾದಲ್ಲಿ ಲಾರಾ ದತ್ತ ಅವರು ನಟಿಯಾಗಿ ಕಾಣಿಸುತ್ತಿಲ್ಲ. ಆದರೆ ಲಾರಾ ಪ್ರಮುಖ ವಿಭಿನ್ನ ಪಾತ್ರವೊಂದರಲ್ಲಿ ಮಿಂಚಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಲಾರಾ, ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ನ್ಯೂಯಾರ್ಕ್ ನಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ, ಚಿತ್ರದಲ್ಲಿ ನಟಿಸುವುದಕ್ಕೆ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.
Comments