'ಕುರುಕ್ಷೇತ್ರ' ಚಿತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಸಿಕ್ತು ಚಾನ್ಸ್..!!

ಜಾಗ್ವಾರ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ ಭರವಸೆಯ ನಟ ಎಂದು ಗುರುತಿಸಿಕೊಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಗೆ ಇದೀಗ ಸುವರ್ಣಾವಕಾಶವೊಂದು ಹುಡುಕಿಕೊಂಡು ಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'ದಲ್ಲಿ ನಟ ನಿಖಿಲ್ ಕುಮಾರ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೀಗಷ್ಟೆ ಹೊರಬಿದ್ದಿದೆ.
'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ 'ದುರ್ಯೋಧನ' ಪಾತ್ರದಲ್ಲಿ ಕಾಣಿಸಿಕೊಂಡರೆ, ನಟ ನಿಖಿಲ್ ಕುಮಾರ್ 'ಅಭಿಮನ್ಯು' ಆಗಿ ಮಿಂಚಲಿದ್ದಾರಂತೆ. ಅಂದ್ಹಾಗೆ, 'ಕುರುಕ್ಷೇತ್ರ' ಚಿತ್ರದಲ್ಲಿ ಶ್ರೀಕೃಷ್ಣನಾಗಿ ವಿ.ರವಿಚಂದ್ರನ್ ನಟಿಸುವುದು ಪಕ್ಕಾ ಆಗಿದೆ. 'ಕುರುಕ್ಷೇತ್ರ' ಚಿತ್ರಕ್ಕೆ ಮುನಿರತ್ನ ಬಂಡವಾಳ ಹಾಕುತ್ತಿದ್ದರೆ, ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ನಿರ್ಮಾಪಕ ಮುನಿರತ್ನ ರವರ ಹುಟ್ಟುಹಬ್ಬದಂದು 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
Comments