ಬಿಗ್ ಬ್ರೇಕಿಂಗ್ : 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ..!!

ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ'ಕ್ಕೆ ಕೊನೆಗೂ ದ್ರೌಪದಿ ಸಿಕ್ಕಿದ್ದಾರೆ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ, ನಯನತಾರ, ಹೀಗೆ ದಕ್ಷಿಣದ ಕೆಲ ಸ್ಟಾರ್ ನಟಿಯರ ಹೆಸರಿನ ನಡುವೆ ಈಗ ಮತ್ತೋರ್ವ ಬಹುಭಾಷಾ ನಟಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.
ಒಂದು ಕಾಲದಲ್ಲಿ ದಕ್ಷಿಣ ಚಿತ್ರ ಜಗತ್ತನ್ನ ಆಳಿದ ನಟಿ ಸ್ನೇಹ ಈಗ 'ಕುರುಕ್ಷೇತ್ರ'ದಲ್ಲಿ ದ್ರೌಪದಿ ಆಗಲಿದ್ದಾರೆ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಘೋಷಣೆ ಆಗಿಲ್ಲ.
ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಸ್ನೇಹ ಕನ್ನಡದಲ್ಲೂ ಅಭಿನಯಿಸಿದ್ದಾರೆ. ರವಿಚಂದ್ರನ್ ಅವರ ಜೊತೆ 'ರವಿಶಾಸ್ತ್ರಿ' ಮತ್ತು ಪ್ರಕಾಶ್ ರೈ ಅಭಿನಯದ 'ಒಗ್ಗರಣೆ' ಚಿತ್ರದಲ್ಲಿ ಸ್ನೇಹ ಕಾಣಿಸಿಕೊಂಡಿದ್ದರು.
ಇದಕ್ಕೂ ಮುಂಚೆ 'ಕುರುಕ್ಷೇತ್ರ' ಚಿತ್ರಕ್ಕೆ ಹರಿಪ್ರಿಯಾ ಹಾಗೂ ರೆಜಿನಾ ಆಯ್ಕೆ ಆಗಿದ್ದಾರಂತೆ. ನರ್ತಿಕಿ ಪಾತ್ರದಲ್ಲಿ ಹರಿಪ್ರಿಯಾ ಹಾಗೂ ದುರ್ಯೋಧನನ ಪತ್ನಿ 'ಭಾನುಮತಿ' ಪಾತ್ರದಲ್ಲಿ ರೆಜಿನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ದರ್ಶನ್ ದುರ್ಯೋಧನ, ರವಿಚಂದ್ರನ್ ಕೃಷ್ಣ, ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ, ಶ್ರೀನಾಥ್ ಧೃತರಾಷ್ಟ್ರರಾಗಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ. ಆದ್ರೆ, ಉಳಿದಂತೆ ಹರಿಪ್ರಿಯಾ, ರೆಜಿನಾ, ಹಾಗೂ ಸ್ನೇಹ ಅವರ ಪಾತ್ರದ ಬಗ್ಗೆ ಮುನಿರತ್ನ ಅವರ ಹುಟ್ಟುಹಬ್ಬದಂದು ಉತ್ತರ ಸಿಗಲಿದೆ.
Comments