ಟೆನಿಸ್ ಆಟಗಾರ ರೋಜರ್ ಫೆಡರರ್ ಅವರಿಗೆ 'ಹಸುಗಳ ಮೇಲಿರುವ ಅಪಾರ ಪ್ರೀತಿ,. ನೀವು ನೋಡಿದ್ದೀರಾ?
ಸ್ವಿಟ್ಜರ್ಲ್ಯಾಂಡ್ : ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸ್ವಿಟ್ಜರ್ಲ್ಯಾಂಡ್ ದೇಶದ ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರ ಅಪರೂಪದ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೊಟೋದಲ್ಲಿ ರೋಜರ್ ಫೆಡರರ್ ಅವರಿಗೆ ಹಸುಗಳ ಬಗ್ಗೆ ಇರುವ ಅಪಾರ ಪ್ರೀತಿಯನ್ನು ತೋರಿಸುತ್ತದೆ.
ಸ್ವಿಸ್ ದೇಶದ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರ ಫೊಟೋ ಒಟ್ಟು ಮೂರು ಫೊಟೋಗಳನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ಹಸುಗಳ ಮೇಲೆ ರೋಜರ್ ಫೆಡರರ್ ಗಿರುವ ಅಪಾರ ಪ್ರೀತಿ ನೋಡಿ ಸಂತೋಷವಾಗಿದೆ. ಒಂದು ಫೊಟೋದಲ್ಲಿ ರೋಜರ್ ಹಸುವಿನ ಹಾಲು ಕರೆಯುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಹಸುಗಳ ಜೊತೆಸಲ್ಲಿ ಫೆಡರರ್ ಅವರನ್ನು ಕಾಣಬಹುದು.
ಆದ್ರೆ ಈ ಫೊಟೋ ತುಂಬಾ ಹಳೆಯದಂತೆ ಕಾಣುತ್ತಿದೆ. ನಮ್ಮೆಲ್ಲರಿಗೂ ರೋಜರ್ ಫೆಡರರ್ ಅವರಿಗೆ ಇರುವಂತಬ ಹಸುಗಳ ಪ್ರೀತಿ ಬಗ್ಗೆ ಮೊದಲ ಬಾರಿಗೆ ತಿಳಿದು ಬಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನ ಖ್ಯಾತ ಟೆನ್ನಿಸ್ ಆಟಗಾರರಾಗಿರುವ ರೋಜರ್ ಫೆಡರರ್ ಪ್ರತಿಷ್ಠಿತ ವಿಂಬಲ್ಡನ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ 8ನೇ ಬಾರಿಗೆ ಈ ಪ್ರಶಸ್ತಿ ಮುದಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು.
Comments