'ಅರ್ಜುನ್ ವೆಡ್ಸ್ ಅಮೃತ' ಇದೇ 21ರಂದು ರಿಲೀಸ್
ಮಂಗಳೂರು: 'ಅರ್ಜುನ್ ವೆಡ್ಸ್ ಅಮೃತ' ಚಿತ್ರ ಇದೇ 21ರಂದು ಬಿಡುಗಡೆಯಾಗುತ್ತಿದೆ. ಈ ತುಳು ಚಿತ್ರ ಕರಾವಳಿಯ ಎಲ್ಲೆಡೆ ತೆರೆ ಕಾಣಲಿದೆ. ರಘು ಶೆಟ್ಟಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರ ಪ್ಕಕಾ ಲವ್ ಸ್ಟೋರಿ ಕಥೆ ಆಧಾರಿತವಾಗಿದೆ. ಅನೂಪ್ ಸಾಗರ್ ಚಿತ್ರದ ನಾಯಕ. ಆರಾಧ್ಯ ಶೆಟ್ಟಿ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ತುಳು ರಂಗಭೂಮಿಯ ಹಲವು ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ. ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರ ಸಿದ್ಧವಾಗಿದೆ. ಜು. 21ರಂದು ಮಂಗಳೂರಿನ ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು, ಉಡುಪಿಯಲ್ಲಿ ಕೆಲ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಕಾಣಲಿದೆ.
Comments