ಕಿರುತೆರೆಗೆ ಬಂದ ನಟಿ ಮೇಘನಾ ಗಾಂವ್ಕರ್ !!!
ನವದೆಹಲಿ: ಸೆಲೆಬ್ರಿಟಿಗಳು ಸಿನಿಮಾದಿಂದ ಕಿರುತೆರೆಗೆ ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ. ಅವರೇ ಕನ್ನಡದ ನಟಿ ಮೇಘನಾ ಗಾಂವ್ಕರ್, ಕಿರುತೆರೆಗೆ ಬರಲು ಮೇಘನಾ ಮನಸ್ಸು ಮಾಡಿದ್ದಾರಂತೆ. 'ಸಿಂಪಲ್ಲಾಗ್ ಇನ್ನೋದ್ ಲವ್ ಸ್ಟೋರಿ ಚಿತ್ರದಿಂದ ಖ್ಯಾತಿ ಪಡೆದ ಮೇಘನಾ ನವೀನ್ ಕೃಷ್ಣ ನಿರ್ದೇಶನದಲ್ಲಿ ಬರುತ್ತಿರುವ ಧಾರವಾಹಿಯಲ್ಲಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ನಿನ್ನೆ ಶೂಟಿಂಗ್ ನಲ್ಲೂ ಮೇಘನಾ ಭಾಗಿಯಾಗಿದ್ದಾರೆ. ಯಾವ ಧಾರವಾಹಿ ಎಂಬುದು ಮಾತ್ರ ಸದ್ಯಕ್ಕೆ ತಿಳಿದು ಬಂದಿಲ್ಲ.
Comments