ಯುಎಇ, ಗಲ್ಫ್ ರಾಷ್ಟ್ರಗಳಲ್ಲಿ ಶಾರುಖ್ ನಟನೆಯ ಚಿತ್ರ ಬಿಡುಗಡೆ
ಮುಂಬೈ: ಹಾಡುಗಳಿಂದ ಸಂಚಲನ ಸೃಷ್ಟಿಸಿರುವ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಜಬ್ ಹ್ಯಾರಿ ಮೆಟ್ ಸೆಜಲ್ ಚಿತ್ರವನ್ನು ಯುಎಇ ಹಾಗೂ ಗಲ್ಫ್ ದೇಶಗಳಲ್ಲಿ ಅಗಸ್ಟ್ 3ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಈ ಕುರಿತು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ಮಧ್ಯ ಏಷ್ಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ತಮ್ಮ ಹಿಂದಿನ ಚಿತ್ರ ರಾಯಿಸ್ ಅನ್ನ ಕೂಡಾ ಈಜಿಪ್ಟ್ ಹಾಗೂ ಜೋರ್ಡನ್ ಗಳಲ್ಲಿ ಬಿಡುಗಡೆ ಮಾಡಿದ್ದರು. ಅಂದಹಾಗೆ ಈ ಚಿತ್ರ ಭಾರತದಲ್ಲಿ ಅಗಸ್ಟ್ 4 ರಂದು ತೆರೆ ಕಾಣಲಿದೆ.
Comments