ಮಾಜಿ ಪ್ರಿಯಕರನ ಚಿತ್ರವನ್ನು ರಿಜೆಕ್ಟ್ ಮಾಡಿದ ಮಾಧುರಿ ದೀಕ್ಷಿತ್?
ಮುಂಬೈ: ಬಾಲಿವುಡ್ ನ ಸಂಜಯ್ ದತ್ತ ಹಾಗೂ ಮಾಧುರಿ ದೀಕ್ಷಿತ್ ಹಿಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ- ಪ್ರೇಮ -ಪ್ರಣಯ ಎಂಬ ಗಾಸಿಪ್ ಗಳು ಕೇಳಿ ಬಂದಿದ್ದವು. ಸಂಜಯ್ ಮಾಧುರಿ ದೀಕ್ಷಿತ್ ಪ್ರೀತಿಸುತ್ತಿದ್ದರು. ಆದರೂ ಇವರಿಬ್ಬರ ಮಧ್ಯೆ ಸಂಬಂಧ ಹಳಸಲು ಬಹಳ ದಿನ ಬೇಕಾಗಿರಲಿಲ್ಲ. ಸಂಜಯ್ ದತ್ತ ಶಸ್ತ್ರಾಸ್ತ್ರಗಳ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡರು, ಆಗ ಮಾಧುರಿ ಶ್ರೀರಾಮ್ ಎಂಬುವರನ್ನು ವಿವಾಹವಾದರು, ಅಮೆರಿಕಾದಲ್ಲಿ ನೆಲೆಸಿದ್ದಾರೆ. ಮತ್ತೆ ತುಂಬಾ ವರ್ಷಗಳ ಬಳಿಕ ಮಾಧುರಿ ಬಾಲಿವುಡ್ ಲನಲ್ಲಿ ಎಂಟ್ರಿ ನೀಡಿದ್ದು ಆಗಿದೆ. ಆದ್ರೆ ಇಬ್ಬರ ಮಧ್ಯದ ಕಹಿ ನೆನಪು ಮಾಸಿಲ್ಲ ಅಂತ ಅನ್ನಿಸುತ್ತೆ.
ಇತ್ತೀಚೆಗೆ ಮಾಧುರಿ ದೀಕ್ಷಿತ್ ಗೆ ಜೋಹರ್ ಸಿನಿಮಾದಲ್ಲಿ ಸಂಜಯ್ ದತ್ತ ಜತೆಗೆ ನಟಿಸಲು ಆಫರ್ ನೀಡಲಾಗಿತ್ತಂತೆ. ಆದ್ರೆ ಮಾಧುರಿ ರಿಜೆಕ್ಟ್ ಮಾಡಿದ್ದಾರಂತೆ. ತನಗೆ ಆಲಿಯಾ ಭಟ್ ಳ ತಾಯಿ ಆಗಿ ನಟಿಸಲು ಇಷ್ಟವಿಲ್ಲ ಎಂಬ ಕಾರಣ ನೀಡಿ ಮಾಧುರಿ ಚಿತ್ರದಿಂದ ದೂರ ಸರಿದ್ದಾರೆ ಎಂಬ ಮಾತುಗಳಿವೆ.
Comments