ನಟಿ ಸಂಯುಕ್ತ ಹೆಗಡೆಗೆ 'ರೋಡೀಸ್'ನಲ್ಲಿ ಸಿಗುತ್ತಾ ಸೆಕೆಂಡ್ ಚಾನ್ಸ್.?
ಸೆಮಿ ಫೈನಲ್ ಗೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ, ಎಂ.ಟಿವಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ರೋಡೀಸ್'ನಿಂದ ನಟಿ ಸಂಯುಕ್ತ ಹೆಗಡೆ ಔಟ್ ಆದರು.
ಟಾಸ್ಕ್ ನಲ್ಲಿ ಕಳಪೆ ಪರ್ಫಾಮೆನ್ಸ್ ನೀಡಿದ ಸಂಯುಕ್ತ, ವೋಟ್ ಔಟ್ ಇಲ್ಲದೇ ಡೈರೆಕ್ಟ್ ಆಗಿ ಎಲಿಮಿನೇಟ್ ಆದರು.ಆದ್ರೆ, 'ರೋಡೀಸ್'ನಲ್ಲಿ ನಟಿ ಸಂಯುಕ್ತ ಜರ್ನಿ ಇಷ್ಟಕ್ಕೆ ಮುಗಿದ ಹಾಗೆ ಕಾಣುತ್ತಿಲ್ಲ. ವೋಟ್ ಔಟ್ ವೇಳೆ ಪುನಃ ಕಾಣಿಸಿಕೊಂಡ ಸಂಯುಕ್ತ, ಸೆಕೆಂಡ್ ಚಾನ್ಸ್ ಗಿಟ್ಟಿಸಿಕೊಳ್ಳುವ ತವಕದಲ್ಲಿ ಇದ್ದಾರೆ.
ಟಾಸ್ಕ್ ನಲ್ಲಿ ಮೂರನೇ ಸ್ಥಾನ ಪಡೆದು ನಟಿ ಸಂಯುಕ್ತ ಹಾಗೂ ಪ್ರಿಯಾಂಕ್ ಔಟ್ ಆಗಿದ್ದರು. ಇನ್ನೂ ವೋಟ್ ಔಟ್ ಮೂಲಕ ಸಮರ್ ಎಲಿಮಿನೇಟ್ ಆಗಿದ್ದರು. ಈಗ ಈ ಮೂವರ ಪೈಕಿ ಒಬ್ಬರಿಗೆ 'ರೋಡೀಸ್' ರಿಯಾಲಿಟಿ ಶೋನಲ್ಲಿ ಸೆಕೆಂಡ್ ಚಾನ್ಸ್' ಲಭಿಸಲಿದೆ.
ಸಂಯುಕ್ತ, ಪ್ರಿಯಾಂಕ್ ಹಾಗೂ ಸಮರ್, ಈ ಮೂವರ ಪೈಕಿ ಯಾರಿಗೆ 'ಸೆಕೆಂಡ್ ಚಾನ್ಸ್' ಸಿಗಬೇಕು ಎಂಬುದನ್ನ ಈಗಾಗಲೇ 'ರೋಡೀಸ್' ಶೋನಿಂದ ಔಟ್ ಆಗಿರುವ ಸ್ಪರ್ಧಿಗಳು ನಿರ್ಧರಿಸಲಿದ್ದಾರೆ.
Comments