ಚಿರಂಜೀವಿ ಚಿತ್ರದಲ್ಲಿ ನಟಿಸಲು ನಯನತಾರಾ ಕೇಳಿದ ಸಂಭಾವನೆ ಎಷ್ಟು.?
ತೆಲುಗು ಹಾಗೂ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯರ ಪೈಕಿ ನಯನತಾರಾ ಕೂಡ ಒಬ್ಬರು. ಕೈತುಂಬ ಚಿತ್ರಗಳನ್ನ ಇಟ್ಟುಕೊಂಡು ಸಿಕ್ಕಾಪಟ್ಟೆ ಬಿಜಿ ಆಗಿರುವ ನಯನತಾರಾಗೆ ಇದೀಗ ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ಲಭಿಸಿದೆ.
ಮೆಗಾ ಸ್ಟಾರ್ ಚಿರಂಜೀವಿ ರವರ 151ನೇ ಸಿನಿಮಾದಲ್ಲಿ ನಟಿಸಲು ನಟಿ ನಯತಾರಾಗೆ ಆಫರ್ ನೀಡಲಾಗಿದೆ.ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ರವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ನಿರ್ದೇಶಕ ಸುರೇಂದ್ರ ರೆಡ್ಡಿ ಹೊರಟಿದ್ದಾರೆ.
'ಉಯ್ಯಲವಾಡ ನರಸಿಂಹ ರೆಡ್ಡಿ' ಪಾತ್ರದಲ್ಲಿ ನಟಿಸಲು ಚಿರಂಜೀವಿ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಇಬ್ಬರು ನಾಯಕಿಯರ ಪೈಕಿ ಒಬ್ಬರಾಗಲು ನಯನತಾರಾ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ.
'ಉಯ್ಯಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸಲು ನಟಿ ನಯನತಾರಾ ಕೇಳಿರುವ ಸಂಭಾವನೆ ಬರೋಬ್ಬರಿ 4 ಕೋಟಿ ರೂಪಾಯಿ ಎಂದು ವರದಿ ಆಗಿದೆ. ನಯನತಾರಾಗೆ ಡಿಮ್ಯಾಂಡ್ ಇರುವ ಕಾರಣ, ಕೇಳಿದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ತಯಾರಿದ್ದಾರಂತೆ.
Comments