ಈ ದೃಶ್ಯದಲ್ಲಿ ಪಾಲ್ಗೊಳ್ಳಲು ಆಲಿಯಾ ಭಟ್ ಗೆ ಭಯವಂತೆ?
ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕಂಡ ಉಡ್ತಾ ಪಂಜಾಬ್ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. IIFA ಅನಾರ್ಡ್ 2017 ಪ್ರಶಸ್ತಿ ಸಮಾರಂಭದಲ್ಲಿ ಅಲಿಯಾ ಭಟ್ ಗೆ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಚಿತ್ರದಲ್ಲಿ ಅಲಿಯಾ ಭಟ್ ಅವರದ್ದು ರೇಪ್ ದೃಶ್ಯವಿತ್ತು. ಇತ್ತೀಚೆಗೆ ಚಿತ್ರದಲ್ಲಿನ ರೇಪ್ ಸೀನ್ ಕುರಿತಾಗಿ ಆಲಿಯಾ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.
ಚಿತ್ರದಲ್ಲಿ ಗ್ಯಾಂಗ್ ರೇಪ್ ದೃಶ್ಯವೊಂದರಲ್ಲಿ ಭಾಗಿಯಾಗುವುದಕ್ಕೆ ಯಾವ ರೀತಿಯ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಕುರಿತು ಹಂಚಿಕೊಂಡಿದ್ದರು. ಆಲಿಯಾ ಹೇಳುವ ಪ್ರಕಾರ, ನಾವು ಸೆಟ್ ಗೆ ಬರುತ್ತೇವೆ. ಆ ದೃಶ್ಯದಲ್ಲಿ ನಟನೆ ಮಾಡುತ್ತೇವೆ. ಆದರೆ ಅಂಥ ಸಂದರ್ಭದಲ್ಲಿ ಪರಿಸ್ಥಿತಿ ಅರಿತು ಚಿರಾಟ ನಡೆಸುತ್ತೇವೆ. ಆದ್ರೆ ನನಗೆ ಈ ವೇಳೆ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ಮನಸ್ಸಿನಲ್ಲಿ ಮತ್ತೇನೋ ಯೋಚನೆ ಕಾಡುತ್ತಿರುತ್ತದೆ. ನನಗೆ ಈ ದೃಶ್ಯ ತುಂಬಾ ಹೊತ್ತು ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ.
ಇಂತಹ ದೃಶ್ಯಗಳಲ್ಲಿ ನಟನೆ ಮಾಡಲು ಮುಜುಗರ ನನನ್ನು ಕಾಡುತ್ತಿತ್ತು. ಆದರೂ ಚಿತ್ರೀಕರಣದಲ್ಲಿ ಸಮಾಧಾನ ದಿಂದ ಇರುವಳಂತೆ ನಟನೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅವಾರ್ಡ್ ಗಳನ್ನು ತನ್ನದಾಗಿಸಿಕೊಂಡಿರುವ ಉಡ್ತಾ ಪಂಜಾಬ್ ಚಿತ್ರದ ಉತ್ತಮ ನಟನೆಗಾಗಿ ಶಾಹಿದ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
Comments