ರಿಜಿಸ್ಟರ್ ಮದುವೆಯಾದ ನಟಿ ರಮ್ಯಾ ಬಾರ್ನಾ ?
ಬೆಂಗಳೂರು: ಕನ್ನಡ ಚಿತ್ರ ನಟಿ ರಮ್ಯಾ ಬಾರ್ನಾ, ಜೆಡಿಎಸ್ ಮುಖಂಡ ಬಂಡಾಯ ನಾಯಕ ಜಮೀರ್ ಅಹ್ಮದ್ ಅವರ ಸಹೋದರಿಯ ಪತಿ ಸಂಬಂಧಿಯೊಬ್ಬರನ್ನು ವರಿಸಿರುವ ಸುದ್ದಿ ವಾಹಿನಿಗಳಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿದೆ. ಪಂಚರಂಗಿ, ಪರಮಾತ್ಮ ಮುಂತಾದ ಚಿತ್ರಗಳಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದರು.ಜಮೀರ್ ಅಹ್ಮದ್ ಅವರ ಭಾವನ ತಮ್ಮನ ಮಗ ಫಹಾದ್ ಅಲಿ ಖಾನ್ ಅವರ ಜತೆಯಲ್ಲಿ ರಮ್ಯಾ ಇದೇ ವರ್ಷ ಮೇ 29ರಂದು ರಿಜಿಸ್ಟರ್ ವಿವಾಹ ಮಾಡಿಕೊಂಡಿದ್ದು, ತಡವಾಗ
29-05-2017ರಂದು ರಮ್ಯಾ ಬಾರ್ನಾ, ಪಹಾದ್ ಅಲಿಖಾನ್ ಅವರ ಜೊತೆ ಶಿವಾಜಿನಗರದ ರಿಜಿಸ್ಟ್ರಾರ್ ಆಫೀಸ್`ನಲ್ಲಿ
ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಹುಡುಗರು, ಪಂಚರಂಗಿ ಸೇರಿದಂತೆ ಕನ್ನಡ, ತೆಲುಗು, ತಮಿಳಿನ 20ಕ್ಕೂ ಅಧಿಕ
ಚಿತ್ರಗಳಲ್ಲಿ ರಮ್ಯಾ ಬಾರ್ನಾ ನಟಿಸಿದ್ದಾರೆ.
ಪಹಾದ್ ಅಲಿಖಾನ್ ಅವರು ಜೆಡಿಎಸ್`ನ ಬಂಡಾಯ ಶಾಸಕ ಜಮೀರ್ ಅವರ ದೂರದ ಸಂಬಂಧಿ ಎಂದು ವರದಿಯಾಗಿದೆ.
ಆದರೆ, ಈ ಬಗ್ಗೆ ಮಾಧ್ಯಮದ ಜೊತೆ ಪ್ರತಿಕ್ರಿಯಿಸಿರುವ ಜಮೀರ್, ಪಹಾದ್ ಅಲಿಖಾನ್ ನನ್ನ ಬಾವನ ತಮ್ಮನ ಮಗನಾಗಿದ್ದು,
ಮುಖ ಪರಿಚಯವಿದೆ. ಆದರೆ, ಈ ಮದುವೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.ಜುಲೈ 21ರಂದು ರಮ್ಯಾ ಬಾರ್ನಾ ನಟಿಸಿರುವ
ಟಾಸ್ ಚಿತ್ರ ಬಿಡುಗಡೆಯಾಗಲಿದೆ. ಇತ್ತೀಚೆಗೆ ಪತ್ರಕರ್ತರ ಜೊತೆ ಮಾತನಾಡಿದ್ದ ನಟಿ ಟಾಸ್ ಚಿತ್ರ ನನ್ನ ಕೊನೆಯ ಚಿತ್ರ
ಎಂಬಂತೆ ಉತ್ತರಿಸಿದ್ದರು.
Comments