18ನೇ ವಯಸ್ಸಿನಲ್ಲಿ ನಟಿ ಕತ್ರಿನಾ ಭೇಟಿ ?
ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮೊದಲ ಯಶಸ್ಸನ್ನು ಪರೀಕ್ಷೆ ಮಾಡಲು ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ರನ್ನು ಭೇಟಿ ಯಾಗಿದ್ದರು. ಸಲ್ಮಾನ್ ಖಾನ್ ಜೊತೆಗಿನ ಮೊದಲ ಭೇಟಿ ನನ್ನ ಜೀವನದಲ್ಲಿ ಮರೆಯಲಾಗದ ಘಳಿಗೆ ಎಂದು ನಟಿ ಕತ್ರಿನಾ ಅಭಿಪ್ರಾಯಪಟ್ಟಿದ್ದಾರೆ.
33 ವರ್ಷದ ನಟಿ ಕತ್ರೀನಾ ಕೈಫ್ 2003ರಲ್ಲಿ ತೆರೆಕಂಡ 'ಬೂಮ್' ಚೊಚ್ಚಲ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ್ದರು. ಆದರೆ
ಈ ಚಿತ್ರದಲ್ಲಿ ಕತ್ರೀನಾ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಯಶಸ್ಸು ಸಿಗಲಿಲ್ಲ. ಮತ್ತೆ 2005ರಲ್ಲಿ ಸಲ್ಮಾನ್ ಅಭಿನಯದ 'ಮೈನೇ ಪ್ಯಾರ್ ಕ್ಯು ಕೀಯಾ'? ಚಿತ್ರದ ಮೂಲಕ ಸಲ್ಮಾನ್ ಖಾನ್ ಜತೆಗೆ ನಟಿಸಿ ಯಶಸ್ಸು ಕಂಡರು.
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಕತ್ರೀನಾ, '18ನೇ ವಯಸ್ಸಿನಲ್ಲಿ ನಿಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು', '18ನೇ ವಯಸ್ಸಿನಲ್ಲಿ ನಟ ಸಲ್ಮಾನ್ ಖಾನ್ ರನ್ನು ಭೇಟಿಯಾಗಿದ್ದೆ, ಇದು ನನ್ನಗೆ ಅವಿಸ್ಮರಣೀಯ ದಿನ' ಎಂದು ತಿಳಿಸಿದ್ದಾರೆ.
ಇನ್ನು ಸಲ್ಮಾನ್ ಹಾಗೂ ಕತ್ರೀನಾ ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (IFA) 18ನೇ ಆವೃತ್ತಿಯ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ.
Comments