'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಿರ್ವಹಿಸುವ ಪಾತ್ರವೇನು.?

'ಕುರುಕ್ಷೇತ್ರ' ಚಿತ್ರದಲ್ಲಿ ನಟಿ ರೆಜಿನಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನ ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಆದರೂ, ರೆಜಿನಾ ರವರದ್ದು 'ಇದೇ' ಪಾತ್ರ ಎಂದು ಕೆಲ ಪತ್ರಿಕೆಗಳು ವರದಿ ಮಾಡಿದೆ.
ಕೆಲ ವರದಿಗಳ ಪ್ರಕಾರ, ನಟಿ ರೆಜಿನಾ 'ಕುರುಕ್ಷೇತ್ರ' ಸಿನಿಮಾದಲ್ಲಿ 'ಭಾನುಮತಿ' ಪಾತ್ರ ನಿರ್ವಹಿಸಲಿದ್ದಾರಂತೆ. ಶ್ರೀಕೃಷ್ಣನ ಅಪ್ಪಟ ಭಕ್ತೆ. ದುರ್ಯೋಧನ ಪತ್ನಿ 'ಭಾನುಮತಿ' ಪಾತ್ರದಲ್ಲಿ ನಟಿ ರೆಜಿನಾ ಮಿಂಚಲಿದ್ದಾರಂತೆ. 'ಕುರುಕ್ಷೇತ್ರ' ಚಿತ್ರದ ಪ್ರಮುಖ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ದ್ರೌಪದಿ ಪಾತ್ರಕ್ಕಾಗಿ ಇನ್ನೂ ಯಾರೂ ಫೈನಲ್ ಆಗಿಲ್ಲ ಎಂದು ಹೇಳಲಾಗುತ್ತಿದೆ.
Comments