ಅಭಿಮಾನಿಗಳಿಂದ ಟೀಕೆಗೆ ಗುರಿಯಾದ ದೀಪಿಕಾ ಪಡುಕೋಣೆ !!!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ಫ್ಯಾನ್ಸ್ ಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ದೀಪಿಕಾ ಪಡುಕೋಣೆ ವ್ಯಾನಿಟಿ ಫೇರ್ ಗೆ ನಡೆಸಿದ ಫೊಟೋ ಶೂಟ್ ನಲ್ಲಿ ಕೆಲ ಫೊಟೋಗಳು ವೈರಲ್ ಆಗಿದ್ದು. ಈ ಫೊಟೋ ದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿರುವ ದೀಪಿಕಾ, ವಜ್ರದ ಆಭರಣಗಳನ್ನು ಧರಿಸಿದ್ದಾರೆ. ಇದೊಂದು ಜ್ಯುವೆಲರಿ ಆ್ಯಡ್ ಗೆ ಸಂಬಂಧಿಸಿದಂತೆ ಫೊಟೋ ಶೂಟ್ ಎನ್ನಲಾಗಿದೆ.
ಈ ಫೊಟೋಗಳನ್ನು ದೀಪಿಕಾ ತಮ್ಮ ಇನ್ ಸ್ಟಾಗ್ರಾಮನಲ್ಲಿ ಶೇರ್ ಮಾಡಿದ್ದು. ಈ ಫೊಟೋದಲ್ಲಿ ದೀಪಿಕಾ ಪಡುಕೋಣೆಗೆ ತೂಕ ಕಡಿಮೆ ಇದ್ದು,, ಹೆಚ್ಚಿಸಿಕೊಳ್ಳುವಂತೆ ಅಭಿಮಾನಿಗಳು ದೀಪಿಕಾಗೆ ಸಲಹೆ ನೀಡಿದ್ದಾರೆ. ಕೆಲವು ಅಭಿಮಾನಿಗಳು ಡೆಡ್ ಬಾಡಿ ಎಂದು ಕಮೆಂಟ್ ಮಾಡಿದ್ದಾರೆ. ದೀಪಿಕಾ ಅಭಿಮಾನಿಗಳು ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇವರ ವಾಕ್ಸಿಮ್ ಫೊಟೋ ಶೂಟ್ ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
Comments