ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ ರೆಜಿನಾ..!!

ಇತ್ತೀಚಿಗಷ್ಟೆ ಸಿನಿಮಾದಲ್ಲಿ ಹರಿಪ್ರಿಯಾ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆಕೆ ಜೊತೆಗೆ ಇದೀಗ ಸಿನಿಮಾದಲ್ಲಿ ಇನ್ನೊಬ್ಬ ನಟಿ ಆಯ್ಕೆ ಆಗಿದ್ದಾರೆ. ಹರಿಪ್ರಿಯಾ ಚಿತ್ರದಲ್ಲಿ ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದು, ಪ್ರಮುಖ ಪಾತ್ರದಲ್ಲಿ ಪರಭಾಷಾ ನಟಿ ನಟಿಸುತ್ತಿದ್ದಾರೆ.
ಈ ಹಿಂದೆ ಕನ್ನಡದಲ್ಲಿ 'ಸೂರ್ಯಕಾಂತಿ' ಎಂಬ ಸಿನಿಮಾ ಮಾಡಿದ್ದ ನಟಿ ರೆಜಿನಾ ಈಗ ಮತ್ತೆ 'ಕುರುಕ್ಷೇತ್ರ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡಲಿದ್ದಾರೆ.
'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಟಿಸುವುದು ಪಕ್ಕಾ ಆಗಿದೆ. ಆದರೆ ಅವರು ಯಾವ ಪಾತ್ರದಲ್ಲಿ ನಟಿಸುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ದ್ರೌಪದಿ ಪಾತ್ರಕ್ಕೆ ನಟಿ ರೆಜಿನಾ ಆಯ್ಕೆ ಆಗಿಲ್ಲ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Comments