'ದೇವದಾಸ್' ಗೆಇಂದಿಗೆ 15 ವರ್ಷ ಪೂರ್ಣಗೊಳಿಸಿದ ಸಂಭ್ರಮ

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ರೋಮ್ಯಾಂಟಿಕ್ ಕಥೆ ಆಧಾರಿತ ಚಿತ್ರ 'ದೇವದಾಸ್' ಇಂದಿಗೆ 15 ವರ್ಷ ಪೂರ್ಣಗೊಳಿಸಿದೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಈ ಚಿತ್ರದ ಕುರಿತು ಚರ್ಚೆಗಳಾಗುತ್ತಿವೆ. 2002ರಲ್ಲಿ ರಿಲೀಸ್ ಕಂಡಿದ್ದ 'ದೇವದಾಸ್' ಚಿತ್ರದಲ್ಲಿ ಶಾರೂಖ್ ಖಾನ್, ಐಶ್ವರ್ಯ ರೈ ಬಚ್ಚನ್ ಹಾಗೂ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
'ದೇವದಾಸ್ 'ಚಿತ್ರದಲ್ಲಿ ಶಾರೂಖ್ ಖಾನ್ ಅವರ ಪಾತ್ರ ಸಾಕಷ್ಟು ಪ್ರೇಕ್ಷಕರನ್ನು ರಂಜಿಸಿತ್ತು, ಚಿತ್ರದಲ್ಲಿ ಐಶ್ವರ್ಯ ಜತೆಗಿನ ಶಾರೂಖ್ ಕೆಮೆಸ್ಟ್ರಿ ನೋಡಿದ ಪ್ರೇಕ್ಷಕರು ಇದುವರೆಗೂ ಮರೆತಿಲ್ಲ. ಇದಕ್ಕಾಗಿ ಶಾರೂಖ್ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಕುಡಿದವರಂತೆ ದೃಶ್ಯಗಳಲ್ಲಿ ನಟಿಸುವುದು ತುಂಬಾ ಕಷ್ಟವಾಗಿತ್ತು. ನಿಜ ಹೇಳುವುದಾದರೆ, ಶಾರೂಖ್ ಅದೆಷ್ಟು ಬಾರಿ ಶೂಟಿಂಗ್ ಆರಂಭವಾಗುವುದಕ್ಕೂ ಮುನ್ನ ಮಧ್ಯಪಾನ ಸೇವಿಸುತ್ತಿದ್ದರಂತೆ. ತೆರೆಯ ಮೇಲೆ ವೈನ್ ಕುಡಿಯುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಕಿಂಗ್ ಖಾನ್ ನಿಜವಾಗಿಯೂ ಕುಡಿದು ಬರುತ್ತಿದ್ದರಂತೆ.
ಇವತ್ತು' ದೇವದಾಸ್ ' ಹೆಸರಿನಲ್ಲಿ ದಿಲೀಪ್ ಕುಮಾರ್ ಹಾಗೂ ನಟ ಶಾರೂಖ್ ಖಾನ್ ಹೆಸರು ಕಣ್ಮುಂದೆ ಬರುತ್ತಾರೆ. ಆದರೆ ಬಾಲಿವುಡ್ ನಟ ಶಾರೂಖ್ ಈ ಚಿತ್ರದಲ್ಲಿ ನಟಿಸಲು ತುಂಬಾ ಶ್ರಮ ಪಟ್ಟಿದ್ದರು. ಈ ಹಿಂದೆ ಇಂಥ ರೋಲ್ ನಲ್ಲಿ ಕಾಣಿಸಿಕೊಳ್ಳಬಾರದಿತ್ತು ಎಂದು ನಟ ಶಾರೂಖ್ ಖಾನ್ ಹೇಳಿದ್ದರು.
Comments