ಕುರುಕ್ಷೇತ್ರ ಚಿತ್ರಕ್ಕೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆ

ಬೆಂಗಳೂರು: ಐತಿಹಾಸಿಕ ಮಹಾಭಾರತ ಕಥೆಯುಳ್ಳ ಕುರುಕ್ಷೇತ್ರ ಸಿನಿಮಾ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವುದು ಕಠಿಣ ಕೆಲಸ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ನೇ ಸಿನಿಮಾ ಇದಾಗಿದೆ. ಈಗಾಗ್ಲೇ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅದೇ ರೀತಿಯಾಗಿ ಹಲವಾರು ನಾಯಕಿಯರ ಹೆಸರುಗಳು ಕೇಳಿ ಬರುತ್ತಿವೆ. ಹರಿಪ್ರಿಯಾ ಹೆಸರು ಅಧಿಕೃತವಾಗಿ ಅಂತಿಮವಾಗಿದ್ದು, ಹರಿಪ್ರಿಯಾ ಪಾತ್ರ ಯಾವುದು ಎಂಬುದರ ಬಗ್ಗೆ ಚಿತ್ರತಂಡ ಹೇಳಿಲ್ಲ. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವೇ ಇದೆ. ಪ್ರತಿಯೊಬ್ಬ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಜುಲೈ 3೦ರಂದು ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಹರಿಪ್ರಿಯಾ ಹಲವಾರು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರದಲ್ಲಿ
ಹರಿಪ್ರಿಯಾ ನಟಿಸುತ್ತಿದ್ದಾರೆ. ಸದ್ಯ ಚಿರಂಜೀವಿ ಸರ್ಜಾ ನಟನೆಯ ಸಂಹಾರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು
ದುನಿಯಾ ವಿಜಯ್ ಜತೆಗೆ ಮೊದಲ ಬಾರಿಗೆ ಕನಕ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.
Comments