ರಾಜಕೀಯದ ಬಗ್ಗೆ ಪೂಜಾ ಗಾಂಧಿ ಹೇಳಿದ ಸಿಕ್ರೇಟ್ ಏನು?

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ 'ಮುಂಗಾರು ಮಳೆ' ಚಿತ್ರ ಆದ್ಮೇಲೆ ಬೇರೆ ಚಿತ್ರಗಳಲ್ಲಿ ಅಷ್ಟೇನು ಯಶಸ್ಸು ಕಾಣಲಿಲ್ಲ. ಚಿತ್ರಗಳನ್ನು ಒಪ್ಪಿಕೊಂಡು ಪದೇ ಪದೇ ಸೋಲು ಅನುಭವಿಸಿದರು. ರಾಜಕೀಯಕ್ಕೆ ಧುಮಕಿ, ಪಕ್ಷದಿಂದ ಪಕ್ಷಕ್ಕೆ ಹಾರಿ, ಹೀನಾಯ ಸೋಲು ಕಂಡವರು. ಚಿತ್ರರಂಗಕ್ಕೆ ಮರುಳಿದ ನಟಿ ರಾಜಕೀಯ ಕಡೆಗೆ ಮುಖ ಮಾಡಲೇ ಇಲ್ಲ. ಈ ಕುರಿತು ಸೂಪರ್ ಟಾಕ್ ಟೈಮ್ ನಲ್ಲಿ ತಮ್ಮ ರಾಜಕೀಯ ಜೀವನದ ಕುರಿತು ಪೂಜಾ ಗಾಂಧಿ ಮಾತನಾಡಿದ್ದಾರೆ. ನಾನು ರಾಜಕೀಯಕ್ಕೆ ಬಂದು ಮಿಸ್ಟೇಕ್ ಮಾಡಿದೆ. ಬೇಕು ಅಂತಲೇ ರಾಜಕೀಯದಿಂದ ದೂರು ಉಳಿದಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ರಾಜಕೀಯ ಅಧ್ಯಾಯ ಸ್ವಲ್ಪ ಬೇಗ ಬಂದಿತ್ತು. ನಾನು ರಾಜಕೀಯಕ್ಕೆ ಬಹಳ ಬೇಗ ಬಂದು ತಪ್ಪು ಮಾಡಿ ಬಿಟ್ಟೆ, ದೊಡ್ಡ ಪಾಠ ಕಲಿತಿದ್ದೇನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ನನ್ನ ಪ್ರೊಡೆಕ್ಷನ್ ಹೌಸ್ ನಲ್ಲಿ ನಿರ್ಮಾಪಕಿ ಆಗಿ ಸಿನಿಮಾ ನಿರ್ಮಾಣ ಮಾಡುವಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಪೂಜಾ ಗಾಂಧಿ ಇದೇ ವೇಳೆ ಹೇಳಿದರು.
Comments