ಕನ್ನಡದ 'ಕೆಂಪೇಗೌಡ' ನೊಂದಿಗೆ ಕಾಣಿಸಿಕೊಳ್ಳಲಿರುವ ಶ್ರೀಶಾಂತ್..!!
ಕ್ರಿಕೆಟ್ ಆಟಗಾರ ಶ್ರೀಶಾಂತ್ ಈಗಾಗಲೇ ನಟನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕ್ರಿಕೆಟರ್ ಶ್ರೀಶಾಂತ್ ಕನ್ನಡದ ಸಿನಿಮಾವೊಂದರಲ್ಲಿ ನಟಿಸಲಿದ್ದಾರಂತೆ. ಕನ್ನಡದ 'ಕೆಂಪೇಗೌಡ 2' ಸಿನಿಮಾದಲ್ಲಿ ಶ್ರೀಶಾಂತ್ ಇರುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ.
'ಕೆಂಪೇಗೌಡ 2' ಕೋಮಲ್ ಅಭಿನಯದ ಸಿನಿಮಾ. ಈ ಸಿನಿಮಾದ ನಿರ್ಮಾಪಕರಾದ ಶಂಕರೇ ಗೌಡ ಚಿತ್ರದ ಒಂದು ಪಾತ್ರಕ್ಕಾಗಿ ಶ್ರೀಶಾಂತ್ ಅವರನ್ನು ಸಂಪರ್ಕ ಮಾಡಿದ್ದಾರಂತೆ. ಚಿತ್ರದ ಕುರಿತು ಮಾತುಕತೆ ನಡೆಸಿದ್ದು ಸದ್ಯ ಶ್ರೀಶಾಂತ್ ಅವರ ಒಪ್ಪಿಗೆಗಾಗಿ ಚಿತ್ರತಂಡ ಕಾಯುತ್ತಿದೆ.
ಕೆಲ ತಿಂಗಳುಗಳ ಹಿಂದೆಯಷ್ಟೇ ಶ್ರೀಶಾಂತ್ ಬೆಂಗಳೂರಿಗೆ ಬಂದು 'ಕಿರಿಕ್ ಪಾರ್ಟಿ' ಚಿತ್ರವನ್ನು ವೀಕ್ಷಿಸಿದ್ದರು. ಆ ಬಳಿಕ ಈಗ ಕನ್ನಡದಲ್ಲಿ ಅಭಿನಯಿಸುವ ಮಾತುಗಳು ಹೆಚ್ಚಾಗಿದೆ. ಸದ್ಯ ಶ್ರೀಶಾಂತ್ ನಟನೆಯ ಮಲಯಾಳಂ ಸಿನಿಮಾ 'ಟೀಮ್ 5' ಇದೇ ವಾರ ಬಿಡುಗಡೆಯಾಗುತ್ತಿದೆ.
Comments