ಕೊಹ್ಲಿಗೆ ಹೆಚ್ಚು ಮಧ್ಯಪಾನದ ಚಟವೇ? ಪಾಕ್ ವಿರುದ್ಧ ಸೋಲಿಗೆ ನಟಿ ರಾಖಿ ಹೇಳಿದ್ರು ಕಾರಣ?
ಮುಂಬೈ: ಬಾಲಿವುಡ್ ನ ವಿವಾದಿತ ನಟಿ ರಾಖಿ ಸಾವಂತ್ ಈ ಬಾರಿ ವಿರಾಟ್ ಕೊಹ್ಲಿ ಮೇಲೆ ಆರೋಪ ಮಾಡಿದ್ದಾರೆ. ಪ್ರತಿ ಬಾರಿ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಇವರು, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಕುರಿತು ರಾಖಿ ಸಾವಂತ್ ಏನೆಂದು ಹೇಳಿದ್ದಾರೆ ಗೊತ್ತಾ!
ಐಸಿಸ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲು ಕಂಡಿರುವುದು ನಿಮಗೆಲ್ಲಾ ತಿಳಿದಿದೆ.
ವಿರಾಟ್ ಕೊಹ್ಲಿ ವಿಫಲರಾಗಲು ಕಾರಣ ತಿಳಿಸಿರುವ ನಟಿ ರಾಖಿ ಸಾವಂತ್ , ಪಾಕ್ ವಿರುದ್ಧದ ವಿರಾಟ್ ಕೊಹ್ಲಿ ಸೋಲಿಗೆ ಅತಿಯಾದ
ಮಧ್ಯಪಾನವೇ ಕಾರಣವಂತೆ. ಅತಿಯಾದ ಧೂಮಪಾನ, ಮದ್ಯಪಾನ ಸೇವನೆ ಮಾಡಿದ್ದರಿಂದ ಪಂದ್ಯದ ದಿನ ಫಿಟ್ ಆಗಿ
ಮೈದಾನದಲ್ಲಿರಲು ಸಾಧ್ಯವಾಗಲಿಲ್ಲ ಎಂದು ನಟಿ ರಾಖಿ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಿಂದ ಪಂದ್ಯದ ಹಿಂದಿನ ರಾತ್ರಿ ಪಾರ್ಟಿ ಮಾಡಿದ್ದರಿಂದ
ಪಾಕಿಸ್ತಾನದ ಎದುರು 180 ರನ್ ಗಳ ಹೀನಾಯ ಸೋಲು ಕಂಡಿತು. ಆದ ಕಾರಣ ಚಾಂಪಿಯನ್ಸ್ ಟ್ರೋಫಿಯ ಪಟ್ಟವು ಕೈ ತಪ್ಪಿತು,
ವಿರಾಟ್ ಮೊದಲು ನೀವು ಸಿಗರೇಟ್ ಸೇದುವುದನ್ನು, ಕುಡಿಯುವುದನ್ನು ಕಡಿಮೆ ಮಾಡಿ ಎಂದು ರಾಖಿ ಸಾವಂತ್ ಸಲಹೆ ನೀಡಿದ್ದಾರಂತೆ.
Comments