ನಟಿ ಶ್ರಿದೇವಿ ಕಣ್ಣೀರಿಟ್ಟಿದ್ದೇಕೆ?
ಮುಂಬೈ:ಶ್ರೀದೇವಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಮಾಮ್' ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷೆನ್ ಕೂಡ ಮಾಡುತ್ತಿದೆ. ಈ ಚಿತ್ರದ ಪ್ರಚಾರ ವೇಳೆ ನಟಿ ಶ್ರೀದೇವಿ ಪಾಕಿಸ್ತಾನಿ ನಟ, ನಟಿಯರಿಬ್ಬರನ್ನು ನೆನೆದು ಕಣ್ಣೀರು ಹಾಕಿರುವ ಕುರಿತು ವಿಡಿಯೋ ವೈರಲ್ ಆಗಿದೆ. ಈ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ. ಕುತೂಹಲಗಳ ಜತೆಗೆ ಚರ್ಚೆಗೆ ಕಾರಣವಾಗಿದೆ.
ಮಾಮ್ ಚಿತ್ರದಲ್ಲಿ ಶ್ರೀದೇವಿ ಜತೆ ಪಾಕಿಸ್ತಾನದ ಅದ್ನಾನ್ ಸಿದ್ಧಿಖಿ, ನಟಿ ಸಜಲ್ ಅಲಿ ಮುಖ್ಯ ಪಾತ್ರವನ್ನು ಪೋಷಿಸಿದ್ದಾರೆ.
ಶ್ರೀದೇವಿ ಮಗಳಾಗಿ ಸಜಲ್ ಅಭಿನಯಿಸಿದ್ದು, ಆದರೆ ಇವರು ಸಿನಿಮಾ ಪ್ರಚಾರದ ವೇಳೆ ಪಾಕಿಸ್ತಾನದಿಂದ ಬರಲು ಸಾಧ್ಯವಾಗಿಲ್ಲವಂತೆ. ಕಾರಣ ಪಾಕ್ ನಟ-ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಬಗ್ಗೆ ವಿರೋಧವಿರುವ ಕಾರಣ ಅವರು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ.
ಆದರೆ, ಚಿತ್ರದಲ್ಲಿನ ಈ ಪಾಕ್ ಕಲಾವಿದರ ಪಾತ್ರಗಳ ಬಗ್ಗೆ ಶ್ಲಾಘಿಸುತ್ತಾ ಭಾವೋದ್ವೇಗಕ್ಕೊಳಗಾಗಿರುವ ನಟಿ ಶ್ರೀದೇವಿಗೆ ಕಣ್ಣೀರು
ತಡೆಯಲಾಗಲಿಲ್ಲವಂತೆ. ಹಾಗಾಗಿ ಸ್ಟೇಜ್ ಮೇಲೆ ಅತ್ತುಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.
Comments