ದೊಡ್ಡ ಸ್ಟಾರ್ ಗಳು ಮಾಡದ ಕಾರ್ಯ ಈ ನಟ ನಿಂದ ಸಾಧ್ಯವಾಗಿದ್ದು ಹೇಗೆ_?
ನವದೆಹಲಿ, ಸಿನಿಮಾ ನಟರು ಮಾಡದ ಕೆಲಸವನ್ನು ಇಲ್ಲೊಬ್ಬ ನಟ ಮಾಡಿ ತೋರಿಸಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಈ ಟಿವಿ
ಸ್ಟಾರ್ ರನ್ನು ಭೇಟಿಯಾಗಿದ್ದಾರೆ. ಜತೆಗೆ ಮೋದಿ ಫೊಟೋ ತೆಗೆಸಿಕೊಂಡಿದ್ದಾರೆ. ಆ ಟಿವಿ ಸ್ಟಾರ್ ಬೇರ್ಯಾರು ಅಲ್ಲ ಅವರೇ ಕರಣ್
ಟ್ಯಾಕರ್. ಇತ್ತೀಚೆಗೆ ಇಸ್ರೇಲ್ ನಲ್ಲಿ ನಡೆದ ಶೋ ವೊಂದರಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದರು.
ಇಸ್ರೇಲ್ ನಲ್ಲಿ ನಡೆದ ಶೋ ವೊಂದರಲ್ಲಿ ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಕೂಡ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ
ಮೋದಿಯವರನ್ನು ಶ್ಲಾಘಿಸಿದ ಟಿವಿ ಸ್ಟಾರ್ ಕರಣ್, ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ನನಗೆ ಸೌಭಾಗ್ಯ. 25
ವರ್ಷಗಳಲ್ಲಿ ಭಾರತದ ಯಾವುದೇ ಪ್ರಧಾನಿಯೂ ಇಸ್ರೇಲ್ ಜತಗೆ ಸ್ನೇಹ ಬೆಳೆಸಿರಲಿಲ್ಲ. ಆದರೆ ಈ ಕೆಲಸವನ್ನು ಪ್ರಧಾನಿ ಮೋದಿ
ಮಾಡಿ ತೋರಿಸಿದ್ದಾರೆ ಎಂದಿದ್ದಾರೆ.
ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಹೋಸ್ಟ್ ಮಾಡುತ್ತಿರುವುದು ಕರಣ್ ಗೆ ಇದೇ ಮೊದಲೇನಲ್ಲ. ಈ ಹಿಂದೆ ನ್ಯೂಯಾರ್ಕ್ ನಲ್ಲಿ
ನಡೆದಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರಂತೆ. ಭಾರತದ ಪ್ರಧಾನಿ ಮೋದಿ ಅವರಂಥ ಗಣ್ಯರ
ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವುದಕ್ಕೆ ಕರಣ್ ಗೆ ಹೆಮ್ಮೆಯ ವಿಷಯವಂತೆ. ‘ನನಗೆ ಪಾಲಿಟಿಕ್ಸ್ ಬಗ್ಗೆ ಗೊತ್ತಿಲ್ಲ. ಆದ್ರೂ ಸ್ಕ್ರಿಪ್ಟ್
ಬರೆಯುವುದಕ್ಕೆ ತುಂಬಾ ತಯಾರಿ ನಡೆಸುತ್ತಿದ್ದೆ, ಟೈಮ್ ದೊರೆತಾಗ ವಿಮಾನ ನಿಲ್ದಾಣದಲ್ಲೂ ಸ್ಕ್ರಿಪ್ಟ್ ಬರೆಯುತ್ತಿದ್ದೆ’ ಎಂದಿದ್ದಾರೆ.
Comments