'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಅಭಿನಯಿಸಲಿದ್ದಾರೆ..!!
ರಾಧಿಕಾ ಕುಮಾರಸ್ವಾಮಿ ಚಾಲೆಂಜಿಂಗ್ ಪಾತ್ರಗಳ ಮೂಲಕ ಮತ್ತೆ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ. ರವಿಚಂದ್ರನ್ ನಿರ್ದೇಶನದ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಅಭಿನಯಿಸಲಿದ್ದಾರೆ.
ರಾಜೇಂದ್ರ ಪೊನ್ನಪ್ಪ ಚಿತ್ರಕ್ಕೆ ರವಿಚಂದ್ರನ್ ಅವರೇ ಲೇಖಕರು. ಈಶ್ವರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನೆಮಾ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಕ್ರೇಜಿಸ್ಟಾರ್ ನಾಯಕನಾಗಿದ್ದು, ಸಂಗೀತ ನಿರ್ದೇಶನದ ಜವಾಬ್ಧಾರಿಯನ್ನೂ ಹೊತ್ತಿದ್ದಾರೆ.
ಒಂದು ದಶಕದ ನಂತರ ರಾಧಿಕಾ ಹಾಗೂ ರವಿಚಂದ್ರನ್ ಜೋಡಿ ತೆರೆ ಮೇಲೆ ಒಂದಾಗುತ್ತಿದ್ದಾರೆ. 2006 ರಲ್ಲಿ ಬಿಡುಗಡೆಯಾಗಿದ್ದ ಹಠವಾದಿ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಈಗಾಗ್ಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ರವಿಚಂದ್ರನ್ ಅವರದ್ದು ವಕೀಲನ ಪಾತ್ರ.
ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಹೆಸರು ರಾಜೇಂದ್ರ ಪೊನ್ನಪ್ಪ ಅಂತಿತ್ತು. ಅದೇ ಹೆಸರಿನಲ್ಲಿ ಈಗ ಚಿತ್ರ ಮಾಡ್ತಿದ್ದಾರೆ. ರಾಧಿಕಾ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ರಾಧಿಕಾ ಈಗಾಗ್ಲೇ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದು, ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಿದ್ದಾರೆ.
Comments