ಆಗ ನಿನ್ನ ಮುಖ ನೋಡಿಕೋ ಅಂದಿದ್ದರು, ಇವತ್ತು ಹಿರೋಯಿನ್!!!

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೋರಂಜನಾತ್ಮಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದ ನಟಿ. ಅವರ
ಅದ್ಭುತ ಪ್ರತಿಭೆಗೆ ನ್ಯಾಷನಲ್ ಫಿಲ್ಮಂ ಅವಾರ್ಡ್ ಹಾಗೂ ಐದು ಫಿಲ್ಮಂಫೇರ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ತಾನು ಸಿನಿಮಾಕ್ಕೆ ಬರುವುದಕ್ಕೂ ಮುನ್ನ ಮೊದಲು ಅನುಭವಿಸಿದ ಅವಮಾನವನ್ನು ಬಾಲಿವುಡ್ ನಟಿ ವಿದ್ಯಾ ಬಾಲನ್ ಬಿಚ್ಚಿಟ್ಟಿದ್ದಾರೆ.
ಸಿನಿಮಾಗಳಲ್ಲಿ ಅವಕಾಶಕ್ಕಾಗಿ ನಿರ್ಮಾಪಕರೊಬ್ಬರ ಬಳಿ ಚಿತ್ರಗಳಲ್ಲಿ ಚಾನ್ಸ್ ನೀಡುವಂತೆ ಕೇಳಿದ್ದಾರಂತೆ ವಿದ್ಯಾ. ಆಗ ನಿನ್ನನ್ನು
ನೀನು ಒಮ್ಮೆ ನೋಡಿಕೋ , ನೀನು ಹೇಗೆ ನಟಿಯಾಗಲು ಸಾಧ್ಯ ಎಂದು ಹಿಯಾಳಿಸಿ ನಿರ್ಮಾಪಕರೊಬ್ಬರು ಮಾತನಾಡಿದ್ದರಂತೆ.
ಹೀಗಂತ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ವೇಳೆ ನಟಿ ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ.
2005ರಲ್ಲಿ ಪರಿಣಿತಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್, ಏಪ್ರಿಲ್ ನಲ್ಲಿ ರಿಲೀಸ್ ಆದ
ಬೇಗಂ ಜಾನ್, ಡರ್ಟಿ, ಹಮಾರಿ ಅಧೂರಿ ಕಹಾನಿ, ಚಿತ್ರದಲ್ಲಿ ವಿದ್ಯಾ ನಟಿಸಿದ್ದರು.
Comments