ಅಭಿಷೇಕ್ ಜೊತೆ ಅಭಿನಯಿಸಲು ನಿರಾಕರಿಸಿದ್ರಾ ಪ್ರಿಯಾಂಕಾ?
'ಗುಸ್ತಾಖಿಂಯಾ' ಚಿತ್ರ ಸೆಟ್ಟೇರುವ ಮುನ್ನವೇ ವಿವಾದಕ್ಕೆ ಆಹಾರವಾಗಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪ್ರಸಿದ್ಧ ಕವಯತ್ರಿ ಅಮೃತಾ ಪ್ರೀತಂರ ಪಾತ್ರ ಮಾಡಲಿದ್ದಾರೆ. ಪ್ರಿಯಾಂಕಾಗೆ ಜೋಡಿಯಾಗಿ ಅಭಿಷೇಕ್ ಬಚ್ಚನ್ ರನ್ನು ಹಾಕಿಕೊಳ್ಳಲು ನಿರ್ಮಾಪಕರು ಮುಂದಾಗಿದ್ರು.
ಆದ್ರೆ ಅಭಿಷೇಕ್ ಜೊತೆಗೆ ನಾಯಕಿಯಾಗಿ ನಟಿಸಲು ಪ್ರಿಯಾಂಕಾ ಹಿಂದೇಟು ಹಾಕಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ ಗುಸ್ತಾಖಿಂಯಾ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಕೂಡ ಸಹ ನಿರ್ಮಾಪಕಿಯಾಗಿದ್ದು, ನಾಯಕ ನಟನಾಗಿ ಅಭಿಷೇಕ್ ಬಚ್ಚನ್ ಆಯ್ಕೆ ಸೂಕ್ತವಲ್ಲ ಎಂದಿದ್ದಾರೆ ಅನ್ನೋ ಆರೋಪವಿತ್ತು.
ಆದ್ರೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಿಯಾಂಕಾ ಚಿತ್ರದ ಸಹ ನಿರ್ಮಾಪಕಿಯಲ್ಲ. ಅಭಿಷೇಕ್ ಆಯ್ಕೆ ಬಗ್ಗೆ ಆಕೆಗೆ ಮಾಹಿತಿಯೇ ಇಲ್ಲ. ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರ ಇದಾಗಿದ್ದು, ಅವರ ನಿರ್ಧಾರವೇ ಅಂತಿಮ ಅಂತಾ ಸ್ಪಷ್ಟಪಡಿಸಿದ್ದಾರೆ.
ಗುಸ್ತಾಖಿಂಯಾ ಚಿತ್ರದಲ್ಲಿ ಸಾಹಿರ್ ಲುಧಿಯಾನ್ವಿ ಪಾತ್ರಕ್ಕಾಗಿ ಚೆನ್ನಾಗಿ ಉರ್ದು ಬಲ್ಲವರು ಬೇಕು. ಈ ಪಾತ್ರಕ್ಕೆ ಇರ್ಫಾನ್ ಖಾನ್ ಸೂಕ್ತರು. ಆದ್ರೆ ಭನ್ಸಾಲಿ ಅವರ ತೀರ್ಮಾನವೇ ಅಂತಿಮ ಎಂದಿದ್ದಾರೆ ಮಧು ಚೋಪ್ರಾ.
Comments