ಬುರ್ಖಾ ಹಾಕಿಕೊಂಡು ಕೋರ್ಟ್ ಗೆ ಹಾಜರಾದ ನಟಿ!
ಮುಂಬೈ: ಬಾಲಿವುಡ್ ವಿವಾದಾತ್ಮಕ ನಟಿ ರಾಖಿ ಸಾವಂತ್ ಪ್ರಕರಣವೊಂದರ ವಿಚಾರಣೆಗೆ ಬರುವಾಗ ಯಾರೂ ಗುರುತು
ಹಿಡಿಯಬಾರದೆಂದು ಬುರ್ಖಾ ಹಾಕಿಕೊಂಡು ಹಾಜರಾಗಿದ್ದಾರೆ. ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಖಿ ಮೇಲೆ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲುಧಿಯಾನಾ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಪ್ರಕರಣದ ವಿಚಾರಣೆಗೆ ಬರುವಾಗ ರಾಖಿ ಬುರ್ಖಾತೊಟ್ಟು ಬಂದಿದ್ದಾರೆ.
ಟಿವಿ ಶೋ ಒಂದರಲ್ಲಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಕ್ಕೆ ರಾಖಿ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆ
ಯಾಚಿಸಿದ್ದಾರೆಂದು ಕೋರ್ಟ್ ಮೂಲಗಳು ಹೇಳಿವೆ. ತಲಾ ಒಂದು ಲಕ್ಷ ಬಾಂಡ್ ನೀಡಿದ ಬಳಿಕ ರಾಖಿ ಸಾವಂತ್ ಗೆ ನ್ಯಾಯಾಲಯ
ಜಾಮೀನು ಮಂಜೂರು ಮಾಡಿತು.
Comments