GST ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಿದು!?
ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾಮ್’ ಚಿತ್ರ ದೇಶೆದೆಲ್ಲೆಡೆ ಬಿಡುಗಡೆಗೊಂಡಿದೆ. ಶ್ರಿದೇವಿ ಪತಿ ಬೋನಿ ಕಪೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, 20 ವರ್ಷಗಳ ನಂತರ ಶ್ರೀದೇವಿ ಮತ್ತೆ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಅಕ್ಷಯ್ ಖ್ನನಾ, ಅದ್ನಾನ್ ಸಿದ್ದಿಕಿ, ಸಜಾಲ್ ಅಲಿ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾಗೆ ಇಂದು ಅಗ್ನಿ ಪರೀಕ್ಷೆ
ಎದುರಾಗಲಿದೆ.
ಅಕ್ಷಯ್ ಖನ್ನಾ ವೃತ್ತಿ ಬದುಕಿಗೆ ನಿರ್ಣಾಯಕ ತಿರುವು ನೀಡುವಂತಹ ಸಿನಿಮಾ ಇದು. ಈ ಚಿತ್ರವನ್ನು ರವಿ ಉದ್ಯಾವರ ನಿರ್ದೇಶನ
ಮಾಡಿದ್ದು, ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗಾಗಿ ಶ್ರಿದೇವಿ ಅಭಿಮಾನಿಗಳು ‘ಮಾಮ್’ ಸಿನಿಮಾಗೆ
ಎಷ್ಟು ಮಾರ್ಕ್ಸ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಜಿಎಸ್ ಟಿ ಪ್ರಭಾವ ಮಾಮ್ ಚಿತ್ರದ ಟಿಕೆಟ್ ಮೇಲೆ ಹೇಗಿರುತ್ತೆ ಎಂಬ ಕುತೂಹಲ ಸಾಕಷ್ಟು ಜನರಲ್ಲಿ ಮೂಡಿದೆ. ಜುಲೈ 1 ರಂದು
ಜಾರಿಯಾಗಿರುವ ಜಿಎಸ್ ಟಿ ಯಿಂದಾಗಿ ಹಲವು ವಸ್ತುಗಳ ದರ ಹೆಚ್ಚಳವಾದರೆ, ಕೆಲವು ವಸ್ತುಗಳ ದರ ಕಡಿಮೆಯಾಗಿದೆ. ಏಕ ತೆರಿಗೆ
ಜಿಎಸ್ ಟಿ ಜಾರಿಯಾಗುವುದರಿಂದ ಚಿತ್ರದ ಮೇಲೆ ಜಿಎಸ್ ಟಿ ತೆರಿಗೆ ಅನ್ವಯವಾಗಲಿದೆ.
Comments