ಕನ್ನಡ ಚಿತ್ರದಲ್ಲಿ ಖ್ಯಾತ ನಟಿ ನಯನತಾರಾ ನಟನೆ ?

06 Jul 2017 11:22 AM | Entertainment
508 Report

ಬೆಂಗಳೂರು: ಕನ್ನಡದಲ್ಲಿ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಕುರುಕ್ಷೇತ್ರ ಚಿತ್ರದಲ್ಲಿ ದಕ್ಷಿಣದ ಖ್ಯಾತ ನಟಿ ನಯನತಾರಾ 

ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. 2011ರಲ್ಲಿ ತೆರೆ ಕಂಡ ಸೂಪರ್ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಇದೀಗ, ಕನ್ನಡಕ್ಕೆ 

ಬರಲಿದ್ದಾರೆ ಎನ್ನಲಾಗುತ್ತಿದೆ. 

ನಯನತಾರಾ ಈ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಜುಲೈ 

23ರಿಂದ ಶೂಟಿಂಗ್ ಆರಂಭವಾಗಲಿದ್ದು, ಚಿತ್ರದ ಪೂರ್ವ ತಯಾರಿಯಲ್ಲಿರುವ ಚಿತ್ರ ತಂಡ ನಯನ ತಾರಾಗೆ ಆಫರ್ ನೀಡಿದೆ. ಆದರೆ, ಈ 

ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೊರೆತಿಲ್ಲ.  

ಶ್ರೀರಾಮ ರಾಜ್ಯಂ ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಯನತಾರಾ ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸಿದ ನಟಿ. 

ಹೀಗಾಗಿ, ದ್ರೌಪತಿ ಪಾತ್ರಕ್ಕೆ ನಯನತಾರಾ ಹೆಸರು ಕೇಳಿ ಬಂದಿದೆ. ರವಿಚಂದ್ರನ್ ಈ ಚಿತ್ರದಲ್ಲಿ ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದು, 

ದರ್ಶನ್ ಧುರ್ಯೋದನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಗಣ್ಣ ಚಿತ್ರ ನಿರ್ದೇಶಿಸುತ್ತಿದ್ದಾರೆ. 

Edited By

venki swamy

Reported By

Sudha Ujja

Comments