‘ವ್ಯಾನಿಟಿ ವ್ಯಾನ್’ ಸೌಲಭ್ಯವಿರಲಿಲ್ಲ,. ಸಿನಿ ಪ್ರಯಾಣದ ಬಗ್ಗೆ ನಟಿ ಶ್ರೀದೇವಿ ಮಾತು
ಮುಂಬೈ : ನಟ ನಟಿಯರು ಶೂಟಿಂಗ್ ಗೆ ಹೊರಡುವಾಗ ಅವರ ಜೊತೆಗೆ ವ್ಯಾನಿಟಿ ವ್ಯಾನ್ ಕೂಡಾ ತೆರಳುವುದು
ಸಾಮಾನ್ಯ.ಬಾಲಿವುಡ್ ನಲ್ಲಿ ಪ್ರಸ್ತುತ ವ್ಯಾನಿಟಿ ವ್ಯಾನ್ ಸೌಲಭ್ಯದ ಬಗ್ಗೆ ಮಾತನಾಡಿರುವ ಬಾಲಿವುಡ್ ತಾರೆ ಶ್ರೀದೇವಿ, ಇಂದಿನ
ದಿನಗಳಲ್ಲಿ ನಟ ನಟಿಯರಿಗೆ ಇಂತಹ ಸೌಲಭ್ಯ ಕಲ್ಪಿಸಿರುವುದಕ್ಕೆ ಸಂತೋಷವಿದೆ ಎಂದಿದ್ದಾರೆ.
ವ್ಯಾನಿಟಿ ವ್ಯಾನ್ ನಲ್ಲಿ ಮೇಕಪ್ ಕಮ್ ಬಟ್ಟೆ ಬದಲಾವಣೆ ಕೋಣೆ, ಮೀಟಿಂಗ್ ರೂಂ, ಬೆಡ್ ರೂಂ, ಟಿವಿ ಅಳವಡಿಕೆ ಸಕಲ ಸೌಲಭ್ಯ
ಇರುತ್ತದೆ. ಆದರೆ ನಮ್ಮ ಸಮಯದಲ್ಲಿ ಇವ್ಯಾವ ಸೌಲಭ್ಯಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಧೆ ಬಿಬಿಸಿ ನಡೆಸಿರುವ ಸಂದರ್ಶನದ ವೇಳೆ ಮಾತನಾಡಿರುವ ಅವರು, ತಮ್ಮ ಸಿನಿ ಪ್ರಯಾಣದ ಬಗ್ಗೆ ಈ ವೇಳೆ
ನೆನೆದಿದ್ದಾರೆ. ಇವತ್ತಿನ ದಿನಗಳಲ್ಲಿ ನಟ-ನಟಿಯರಿಗೆ ವ್ಯಾನಿಟಿ ವ್ಯಾನ್ ಇರುವುದು ಸಂತೋಷ ತರುತ್ತದೆ. ನಮ್ಮ ಸಮಯದಲ್ಲಿ
ಯಾವುದೇ ಸೌಲಭ್ಯಗಳಿರಲಿಲ್ಲ. ಚಿತ್ರೀಕರಣದ ವೇಳೆ ನಟಿಯರು ಬಟ್ಟೆ ಬದಲಾಯಿಸಬೇಕಾದರೆ ಮರದ ಹಿಂದೆ, ಪೊದೆಗಳ ಹಿಂದೆ
ಹೋಗಿ ಬಟ್ಟೆ ಬದಲಾಯಿಸುವ ಪರಿಸ್ಥಿತಿ ಇತ್ತು. ಆದ್ರೆ ಇವತ್ತು ಎಲ್ಲವು ಬದಲಾಗಿದೆ.ಇವತ್ತಿನ ದಿನಗಳಲ್ಲಿ ವ್ಯಾನಿಟಿ ವ್ಯಾನ್ ನಂತಹ
ಸಾಕಷ್ಟು ಸೌಲಭ್ಯಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಳೆಯಲ್ಲಿ ನೆನೆಯುವ ಚಿತ್ರೀಕರಣದಲ್ಲಿ ಭಾಗವಹಿಸುವುದೆಂದರೆ ನಟಿ ಶ್ರೀದೇವಿ ಅವರಿಗೆ ಇಷ್ಟವಿಲ್ಲವಂತೆ. ಅವರು ಈ ಹಿಂದೆ
ನಟಿಸಿದ್ದ ಕೆಲ ಚಿತ್ರಗಳು ಇದೇ ರೀತಿ ದೃಶ್ಯಗಳು ಇದ್ದ ಕಾರಣಕ್ಕೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವ ಸ್ಥಿತಿ ಎದುರಾಗಿತ್ತು
ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಶ್ರೀದೇವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮುಂಬರುವ ಚಿತ್ರ 'ಮಾಮ್' ಶೀರ್ಘದಲ್ಲೇ ತೆರೆ ಕಾಣಲಿದೆ. ಈ
ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಜುಲೈ 7ರಂದು 'ಮಾಮ್' ಚಿತ್ರ ರಿಲೀಸ್
ಕಾಣಲಿದೆ.
Comments