'ಕೋಟಿಗೊಬ್ಬ 3': ಮತ್ತೆ ಕೋಟಿಗೊಬ್ಬನ ಅವತಾರದಲ್ಲಿ ಕಿಚ್ಚ ಸುದೀಪ್..!!

ಸಾಹಸ ಸಿಂಹ ವಿಷ್ಣುವರ್ಧನ್ ಅವರ 'ಕೋಟಿಗೊಬ್ಬ' ಸೂಪರ್ ಹಿಟ್ ಆಗಿತ್ತು. ಆ ಬಳಿಕ ಕಳೆದ ವರ್ಷವಷ್ಟೇ ಸುದೀಪ್ 'ಕೋಟಿಗೊಬ್ಬ 2' ಸಿನಿಮಾ ಮಾಡಿದ್ದರು. ಆ ಸಿನಿಮಾ ಕೂಡ ಯಶಸ್ಸು ಗಳಿಸಿತ್ತು. ಇದೀಗ 'ಕೋಟಿಗೊಬ್ಬ 3' ಸಿನಿಮಾ ಸೆಟ್ಟೇರುವ ಟೈಂ ಬಂದಿದೆ.
ಸದ್ಯ 'ದಿ ವಿಲನ್' ಸಿನಿಮಾದಲ್ಲಿ ಬಿಜಿ ಆಗಿರುವ ಸುದೀಪ್ ಆ ಸಿನಿಮಾದ ನಂತರ 'ಕೋಟಿಗೊಬ್ಬ 3' ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್ ಶುರುವಾಗಿದೆ. 'ಕೋಟಿಗೊಬ್ಬ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಬಾಬು ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ ಎಂಬುದು ವಿಶೇಷ.
Comments