ಬಾಲಿವುಡ್ ನಟ ಜಾಯೆದ್ ಖಾನ್ B'Day spcl

ಮುಂಬೈ: 2004ರಲ್ಲಿ ತೆರೆ ಕಂಡಿದ್ದ ಫರ್ಹಾ ಖಾನ್ ಚಿತ್ರ 'ಮೈ ಹೂಂ ನಾ' ಚಿತ್ರದಲ್ಲಿ ಖ್ಯಾತಿ ಗಳಿಸಿದ್ದ ನಟ ಜಾಯೆದ್ ಖಾನ್ ಇದೀಗ
36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ನಟ ಇವತ್ತು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 5 ಜುಲೈ 1980ರಲ್ಲಿ ಮುಂಬೈ
ಮಹಾರಾಷ್ಟ್ರದಲ್ಲಿ ಜನಿಸಿದ ನಟ ಜಾಯೆದ್, ಬಾಲಿವುಡ್ ನಟ ಸಂಜಯ್ ಖಾನ್ ಹಾಗೂ ಜರೀನ್ ಖಾನ್ ಅವರ ಪುತ್ರ. ನಾಲ್ಗು ಜನ
ಮಕ್ಕಳಲ್ಲಿ ಜಾಯೆದ್ ಕಡೆಯವರು.
2003ರಲ್ಲಿ ಚೊಚ್ಚಲ ಚಿತ್ರ ‘ಚುರಾ ಲಿಯಾ ಹೇ ತುಮ್ನೇ’ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಜಾಯೆದ್ ಬಾಲ್ಯದ ಗೆಳತಿ ಇಶಾ
ಡಿಯೋಲ್ ಜತೆಗೆ ನಟಿಸಿದ್ದರು. 2004 ರಲ್ಲಿ ತೆರೆ ಕಂಡ ‘ಮೈ ಹೂಂ ನಾ’ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು, ‘ಶಾದಿ ನಂ
-1’, ‘ಮಿಷನ್ ಇಸ್ತಾಬುಲ್’, ‘ಫೈಟ್ ಕ್ಲಬ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
Comments