ಚಿಕ್ಕ ವಯಸ್ಸಿನ ನಟನ ಜತೆ ಐಶ್ವರ್ಯ ರೈ ಮತ್ತೆ ನಟನೆ!?
ಮುಂಬೈ. ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ತನಗಿಂತಲೂ ಚಿಕ್ಕ ವಯಸ್ಸಿನ ನಟನ ಜತೆ ಸ್ಕ್ರೀನ್ ಶೇರ್ ಮಾಡಲು ಸಿದ್ಧರಾಗುತ್ತಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಮುಂಬರುವ ಚಿತ್ರದಲ್ಲಿ ಐಶ್ವರ್ಯ ರೈ ಫೆನಿ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದಲ್ಲಿ ನಟ ಅನಿಲ್ ಕಪೂರ್ ಹಾಗೂ ಐಶ್ವರ್ಯ ನಟಿಸಲಿದ್ದು,. ಆದ್ರೆಅನಿಲ್ ಕಪೂರ್ ಜತೆಗೆ ಐಶ್ವರ್ಯ ಯಾವುದೇ ಹಸಿಬಿಸಿ ದೃಶ್ಯಗಳಿಲ್ಲದಿದ್ದರೂ,ಈ ಚಿತ್ರದಲ್ಲಿ ಯುವ ನಟರೊಬ್ಬರ ಜತೆಗೆ ಐಶ್ವರ್ಯ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಅಧಿಕೃತವಾಗಿ ನಟ ಯಾರು ಎಂಬುವುದರ ಕುರಿತುಯಾವುದೇ ಮಾಹಿತಿ ದೊರಕಿಲ್ಲ. ಇನ್ನು ಕಳೆದ ವರ್ಷ ಐಶ್ವರ್ಯ ರೈ’ ಏ ದಿಲ್ ಹೇ ಮುಷ್ಕಿಲ್ ‘ಚಿತ್ರದಲ್ಲಿ ತನಗಿಂತಲೂ ಚಿಕ್ಕ ವಯಸ್ಸಿನ ನಟ ಅರ್ಜುನ್ ಕಪೂರ್ ಜತೆಗೆ ನಟಿಸಿ ಮೆಚ್ಚುಗೆ ಗಳಿಸಿದ್ದರು. ಐಶ್ವರ್ಯ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿತ್ತು. ಆದರೆ ಮತ್ತೊಮ್ಮೆ ಐಶ್ವರ್ಯ ರೈ ಇಂಥದ್ದೇ ಚಿತ್ರದಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
Comments