ಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ..!!
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಪಾಲಿನ ಶುಭ ದಿನ ಜುಲೈ 3 ಬಂದೇ ಬಿಡ್ತು. ಜುಲೈ 3, ಅಂದ್ರೆ ಇಂದು ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ವೀರಾಜಪೇಟೆಯಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ.
ಕಿರಿಕ್ ಜೋಡಿಯ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಬಂಧು, ಬಾಂಧವರ ಜೊತೆ ಚಿತ್ರರಂಗದ ಕೆಲ ತಾರೆಯರು ಕೂಡ ಆಗಮಿಸಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥಕ್ಕೆ ವಿರಾಜಪೇಟೆಯ ಸೆರಿನಿಟಿ ಹಾಲ್ ಶೃಂಗಾರಗೊಂಡಿದ್ದು, ಸಂಜೆ 6.30ಕ್ಕೆ ಅತಿಥಿಗಳಿಗಾಗಿ ಔತಣಕೂಟವನ್ನ ಏರ್ಪಡಿಲಾಗಿದೆ. ಹೀಗಾಗಿ, ಇಂದು ಎಲ್ಲರ ಕಣ್ಣು ವಿರಾಜಪೇಟೆಯತ್ತ ಬೀಳಲಿದೆ.
ಇನ್ನು ನಿಶ್ಚಿತಾರ್ಥದ ದಿನವಾದ ಇಂದು ನವ ಜೋಡಿಗಳು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ರಶ್ಮಿಕಾ ಅವರು ಪೀಚ್ ಕಲರ್ ನ ಗೌನ್ ನಲ್ಲಿ ಮಿಂಚಲಿದ್ದು, ರಕ್ಷಿತ್ ಶೆಟ್ಟಿ ಕೆನೆ ಬಣ್ಣದ ಟುಕ್ಸೆಡೊ ಮತ್ತು ಪೀಚ್ ಕಲರ್ ನ ಟೈ ನಲ್ಲಿ ಕಂಗೊಳಿಸಿದ್ದಾರಂತೆ.
'ಕಿರಿಕ್ ಪಾರ್ಟಿ' ಚಿತ್ರದ ಯಶಸ್ವಿ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಅವರೇ ಹೇಳಿರುವ ಪ್ರಕಾರ, ಎರಡು ವರ್ಷದ ನಂತರ ಮದುವೆ ಆಗಲು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
Comments