ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ 'ಆರೆಂಜ್' ?
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮುಂಬರುವ ಚಿತ್ರ 'ಮುಗುಳನಗೆ' ಚಿತ್ರದ ಕುತೂಹಲ ಶುರುವಾಗಿದೆ ಇದರ ಬೆನ್ನಲ್ಲೇ ನಟ ಗಣೇಶ್ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ. ಗಣೇಶ್ ಹೊಸಾ ಚಿತ್ರ 'ಆರೆಂಜ್' ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಚಿತ್ರವನ್ನು ಝೂಮ್ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಎರಡನೇ ಬಾರಿ ಗಣೇಶ್ ಜತೆಯಾಗಲಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಗೀತ ನಿರ್ದೇಶನವಿದೆ. ಜುಲೈ 2ರಂದು ನಟ ಗಣೇಶ್ ಹುಟ್ಟು ಹಬ್ಬದ ದಿನದಂದು ಚಿತ್ರದ ಟೈಟಲ್ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಸದ್ಯ ಗಣೇಶ್ ಭಟ್ ಅವರ 'ಮುಗುಳು ನಗೆ' ಚಿತ್ರೀಕರಣ ಮುಗಿಸಿಕೊಂಡು, ಗಣೇಶ್ ಸಿಂಪಲ್ ಸುನಿ ನಿರ್ದೇಶನದ 'ಚಮಕ್' ಚಿತ್ರದ ಚಿತ್ರೀಕರಣದಲ್ಲಿ ನಟ ಗಣೇಶ್ ಬ್ಯೂಸಿಯಾಗಿದ್ದಾರೆ.
Comments