ನಟಿ ಟಬು ಮನದಾಳದ ಮಾತು!?



ಮುಂಬೈ: ಬಾಲಿವುಡ್ ನಟಿ ಟಬು ತಮ್ಮ ಸಹನಟ ಅಜಯ್ ದೇವಗನ್ ಬಗ್ಗೆ ಮನದಾಳದ ಮಾತುಗಳನ್ನು ಆಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿರುವ ನಟಿ ಟಬು, ತನಗೆ ಅಜಯ್ ಒಬ್ಬ ಸಹನಟ ಮಾತ್ರವಲ್ಲ 25 ವರ್ಷಗಳಿಂದ ಒಬ್ಬ ಒಳ್ಳೆಯ ಸ್ನೇಹಿತ. ತಮ್ಮಿಬ್ಬರ ಸ್ನೇಹ ಬಾಂದವ್ಯದ ಬಗ್ಗೆ ಟಬು ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಮದುವೆಯಾಗದೇ ಸಿಂಗಲ್ ಆಗಿರುವುದಕ್ಕೆ ನಟ ಅಜಯ್ ದೇವಗನ್ ಕಾರಣವಂತೆ. ಹೀಗಂತ ಸ್ವತ: ಟಬು ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಅಜಯ್, ಟಬು ಅವರ ಸಹೋದರ ಸಂಬಂಧಿ ಸಮೀರ್ ಆರ್ಯಾ ಅವರ ಪಕ್ಕದ ಮನೆಯಲ್ಲಿ ವಾಸವಿದ್ದರಂತೆ ಟಬು ಮತ್ತು ಸಮೀರ್ ಗೆ ಅಜಯ್ ತುಂಬಾ ಅತ್ಮೀಯ ಸ್ನೇಹಿತರಾಗಿದ್ದರಂತೆ. ಟಬು ಹೇಳೋ ಪ್ರಕಾರ ಸಮೀರ್ ಮತ್ತು ಅಜಯ್ ನನ್ನ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿದ್ದರು. ಯಾವುದೇ ಹುಡುಗ ನನ್ನ ಜತೆ ಮಾತಾಡಿದರೆ ಸಾಕು, ಅವನನ್ನು ಹೊಡೆದು, ಬೆದರಿಸಿ ಬರುತ್ತಿದ್ದರು. ಇದೇ ಕಾರಣಕ್ಕೆ ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ತಮಾಷೆ ಆಗಿ ಮಾತನಾಡಿದ್ದಾರೆ.ಅಲ್ಲದೇ ಈಗ ಅಜಯ್ ಗೆ ತಮ್ಮ ತಪ್ಪಿನ ಅರಿವಾಗಿರಬೇಕು. ಒಟ್ಟಲ್ಲಿ ಟಬು ಹೇಳಿಕೆ ನಿಜಕ್ಕೂ ಎಲ್ಲರಿಗೂ ಶಾಕ್ ನೀಡುವಂತಿದೆ.
Comments